
ಸಿಂಗಾಪುರ: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೋಡಿ ಸಿಂಗಾಪುರದಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫೈನಲ್ಸ್ ನಲ್ಲಿ ಪ್ರಶಸ್ತಿ ವಿಜೇತರಾಗಿದ್ದಾರೆ.
ಸಾನಿಯಾ ಮತ್ತು ಹಿಂಗಿಸ್ ಜೋಡಿ ಫೈನಲ್ನಲ್ಲಿ ಸ್ಪಾನಿಷ್ ಆಟಗಾರ್ತಿಯರಾದ ಮಗುರುಜಾ ಗಾರ್ಬಿ ಮತ್ತು ಸುಯೆರೇಜ್ ನಾವಾ ಕಾರ್ಲಾ ಜೋಡಿಯನ್ನು 6-0, 6-3ರಿಂದ ಮಣಿಸುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಆ ಮೂಲಕ ಟೆನ್ನಿಸ್ ಲೋಕದಲ್ಲಿ ಸಾನ್ಟಿನಾ ಎಂದೇ ಖ್ಯಾತರಾಗಿರುವ ಭಾರತ-ಸ್ವಿಸ್ ಜೋಡಿ ವರ್ಷದ 9ನೇ ಪ್ರಶಸ್ತಿ ಗಳಿಸಿಕೊಂಡಂತಾಗಿದೆ. ಸಾನಿಯಾ ಪಾಲಿಗೆ ಇದು ವರ್ಷದ 10ನೇ ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿ ಗೆಲುವಿನೊಂದಿಗೆ ಸಾನ್ಟಿನಾ ಜೋಡಿ ತಾವು ನಂಬರ್ ಒನ್ ಜೋಡಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
Advertisement