
ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಶ್ರೀಲಂಕಾದ ಹಿರಿಯ ಆಟಗಾರ ಕುಮಾರ್ ಸಂಗಕ್ಕಾರ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿ ಅಸಭ್ಯ ಫೋಟೊ ಒಂದನ್ನು ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿದ ಸಂಗಕ್ಕಾರ ನಂತರ, ಈ ವಿಷಯವನ್ನು ಟ್ವಿಟರ್ ಮೂಲಕವೆ ತಿಳಿಸಿದ್ದಾರೆ. ಅಲ್ಲದೆ ತಮ್ಮ ಖಾತೆಯನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದ್ದಾರೆ. ``ನನ್ನ ಟ್ವಿಟರ್ ಅನ್ನು ಹ್ಯಾಕ್ ಮಾಡಲಾಗಿದೆ. ಹಾಗಾಗಿ ಅದನ್ನು ಸರಿಪಡಿಸಬೇಕಿದೆ. ಕೌಂಟಿ ಕ್ರಿಕೆಟ್ ಪಂದ್ಯದಲ್ಲಿದ್ದು, ಈ ಖಾತೆ ಯಿಂದ ಪೋಸ್ಟ್ ಆಗುವ ಅನಗತ್ಯ ಟ್ವೀಟ್‍ಗಳನ್ನು ನಿರ್ಲಕ್ಷಿಸಿ'' ಎಂದು ಸಂಗಕ್ಕಾರ ಕೋರಿದ್ದಾರೆ.
Advertisement