
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಚೀನಾ ಬ್ಯಾಡ್ಮಿಂಟನ್ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡಿದ ನಂತರ ತನ್ನ ಮುಂದಿನ ಗುರಿ ಸ್ಪೇನ್‍ನ ಕ್ಯಾರೋಲಿನ್ ಮರಿನ್ ಎಂದು ಭಾರತದ ಟೆನಿಸ್ ತಾರೆ ಸೈನಾ ನೆಹ್ವಾಲ್ ತಿಳಿಸಿದ್ದಾರೆ.
ಇತ್ತೀಚೆಗೆ ಸೈನಾ ನೆಹ್ವಾಲ್ ಸ್ಪೈನ್ ಆಟಗಾರ್ತಿ ವಿರುದ್ಧ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಮತ್ತು ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಸೋಲನುಭವಿಸಿದ್ದರು. ಸದ್ಯದಲ್ಲೇ ಜಪಾನ್ ಓಪನ್ ಟೂರ್ನಿ ಆರಂಭವಾಗಲಿದ್ದು, ವಿಶ್ವದ ಎರಡನೇ ರ್ಯಾಂಕಿಂಗ್‍ನ ಆಟಗಾರ್ತಿಗೆ ತಿರುಗೇಟು ನೀಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ನಗರದಲ್ಲಿ ಹರ್ಬಲ್ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೈನಾ ಸುದ್ದಿಗಾರರ ಜತೆಗೆ ಮಾತನಾಡಿ, ``ಮರಿನ್ ಅವರನ್ನು ಮಣಿಸಲು ಪ್ರಯತ್ನಿಸುತ್ತೇನೆ. ಜಪಾನ್ ಓಪನ್ ಟೂರ್ನಿಯಲ್ಲಿನ ಪ್ರಮುಖ ಗುರಿ ಇದೇ ಆಗಿದೆ. ಪ್ರಮುಖ ಎರಡು ಅಂತಾರಾಷ್ಟ್ರೀಯ ಟೂರ್ನಿಯ ಫೈನಲ್ ಸುತ್ತಿನಲ್ಲಿ ಆಕೆ ನನ್ನನ್ನು ಮಣಿಸಿದ್ದು ನನ್ನ ಗಮನದಲ್ಲಿದೆ'' ಎಂದರು.
Advertisement