ಉದ್ದೀಪನಾ ಜಾಲದಲ್ಲಿ ಬಾಕ್ಸರ್ ಮೇವೆದರ್?

ವಿಶ್ವದ ಅತೀ ಶ್ರೀಮಂತ ಕ್ರೀಡಾಳು ಎಂದೇ ಖ್ಯಾತಿ ಪಡೆದಿರುವೆ ಅವೆುರಿಕದ ಹೆಸೆರಾಂತ ಬಾಕ್ಸರ್ ಫ್ಲಾಯ್ಡ್ ಮೇವೆದರ್, ಮೇ 2ರಂದು ನಡೆದಿದ್ದ ಶತಮಾನದ ಮಹಾ...
ಶತಮಾನದ ಬಾಕ್ಸಿಂಗ್ ಪಂದ್ಯ ಗೆದ್ದಿದ್ದ ಫ್ಲಾಯ್ಡ್ ಮೇವೆದರ್ (ಸಂಗ್ರಹ ಚಿತ್ರ)
ಶತಮಾನದ ಬಾಕ್ಸಿಂಗ್ ಪಂದ್ಯ ಗೆದ್ದಿದ್ದ ಫ್ಲಾಯ್ಡ್ ಮೇವೆದರ್ (ಸಂಗ್ರಹ ಚಿತ್ರ)

ನಾಳೆ ನಡೆಯಲಿದೆ ಮತ್ತೊಂದು ಫೈಟ್
ಲಾಸ್ ವೇಗಾಸ್:
  ವಿಶ್ವದ ಅತೀ ಶ್ರೀಮಂತ ಕ್ರೀಡಾಳು ಎಂದೇ ಖ್ಯಾತಿ ಪಡೆದಿರುವೆ ಅವೆುರಿಕದ ಹೆಸೆರಾಂತ ಬಾಕ್ಸರ್ ಫ್ಲಾಯ್ಡ್ ಮೇವೆದರ್, ಮೇ 2ರಂದು ನಡೆದಿದ್ದ ಶತಮಾನದ ಮಹಾ  ಕಾಳಗ'ದ ಮುನ್ನಾ ದಿನ ನಿಷೇಧಿತ ಐವಿ (ಇಂಟ್ರಾ ವೆನಸ್) ಎಂಬ ಚುಚ್ಚುಮದ್ದು ತೆಗೆದುಕೊಂಡಿದ್ದರೆಂದು ಡೈಲಿ ಮೇಲ್ ವರದಿ ಮಾಡಿದೆ.

ಆದರೆ, ಮ್ಯಾನಿ ಪಕಾವೊ ವಿರುದ್ಧದ ಈ ಮಹಾ ಗುದ್ದಾಟ ನಡೆದ 19 ದಿನಗಳ ನಂತರ, ಮೇವೆದರ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳಿಂದ ಅಮೆರಿಕ ಉದ್ದೀಪನಾ ನಿಗ್ರಹ ಸಂಸ್ಥೆ  (ಯುಎಸ್‍ಎಡಿಎ) ವಿನಾಯ್ತಿ ನೀಡಿತ್ತೆಂಬ ಸುದ್ದಿ ಎಲ್ಲರ ಹುಬ್ಬೇರಿಸಿದೆ. ಶತಮಾನದ ಜಿದ್ದಾಜಿದ್ದಿಯಲ್ಲಿ ಮೇವೆದರ್, ರು.1530 ಕೋಟಿ ಬಹುಮಾನಕ್ಕೆ ಭಾಜನರಾಗಿದ್ದರು.

ಯುಎಸ್‍ಎಡಿಎ ಹೇಳೋದೇನು?
ನಿಯಮಗಳ ಅನುಸಾರ, ಶತಮಾನದ ಕಾಳಗದ ಹಿಂದಿನ ದಿನ ರಾತ್ರಿ ಮೇವೆದರ್ ಅವರನ್ನು ಯುಎಸ್ ಎಡಿಎ ಅಧಿಕಾರಿಗಳು ಪರೀಕ್ಷೆಗೊಳಪಡಿಸಿದ್ದರು. ಆಗ, ಅವರು ಐವಿ ಚುಚ್ಚುಮದ್ದು  ತೆಗೆದುಕೊಂಡಿರುವುದು ಪತ್ತೆಯಾಗಿತ್ತು. ಐವಿ ಚುಚ್ಚುಮದ್ದುಗಳು ಉದ್ದೀಪನಾ ಮದ್ದನ್ನು ಪರೀಕ್ಷೆ ವೇಳೆ ಮರೆಮಾಚುವುದರಿಂದ ಅವುಗಳನ್ನು ಅಂತಾರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ  ಸಂಸ್ಥೆ ನಿಷೇಧಿಸಿದೆ. ಆದರೆ, ಮೇವೆದರ್ ಸತತವಾಗಿ ನಿರ್ಜಲೀಕರಣ (ಡಿ ಹೈಡ್ರೇಷನ್)ದಿಂದ ಬಳಲುತ್ತಿರುವುದರಿಂದ ಅದರ ವಿರುದ್ಧ ಹೋರಾಡಲು ಅವರು, ಐವಿ ಚುಚ್ಚುಮದ್ದುಗಳ ಮೊರೆ  ಹೋಗುತ್ತಾರೆಂದು ಮೇವೆದರ್ ತಂಡ ವಿವರಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಕೂಡದೆಂದು ಮನವಿಯನ್ನೂ ಸಲ್ಲಿಸಿತ್ತು. ಇದರಿಂದ ಗೊಂದಲಕ್ಕೊಳಗಾದ ಯುಎಸ್ಎಡಿಎ, ಮೇವೆದರ್ಗೆ  ಶಿಕ್ಷೆಯಿಂದ ವಿನಾಯ್ತಿ ನೀಡಿದೆ.

ಎನ್‍ಎಸ್‍ಎಸಿ ಕಿಡಿ
ಐವಿ ಚುಚ್ಚುಮದ್ದು ಸೇವನೆ ವಿಚಾರವನ್ನು ತನಗೆ ತಿಳಿಸದೇ ಇದ್ದಿದ್ದಕ್ಕಾಗಿ ಯುಎಸ್‍ಎಡಿಎ ಸಂಸ್ಥೆಯನ್ನು ನೇವಡಾ ಸ್ಟೇಟ್ ಅಥ್ಲೆಟಿಕ್ಸ್ ಆಯೋಗ (ಎನ್‍ಎಸ್ಎಸಿ) ತೀವ್ರ ತರಾಟೆಗೆ  ತೆಗೆದುಕೊಂಡಿದೆ. ಶತಮಾನದ ಕಾಳಗವನ್ನು ಆಯೋಜಿಸಿದ್ದ ತನಗೆ, ಈ ವಿಚಾರ ಮರೆ ಮಾಚಿದ್ದು ಸರಿಯಲ್ಲ ಎಂದು ಎನ್‍ಎಸ್‍ಎಸಿ, ಯುಎಸ್‍ಎಡಿಎ ನಡೆಯನ್ನು ಆಕ್ಷೇಪಿಸಿದೆ.

ಕುಸಿದ ಜನಪ್ರಿಯತೆ
ಇನ್ನು ಇದೇ ಶನಿವಾರ (ಸೆ. 12) ನಡೆಯಬೇಕಿರುವ ಮೇವೆದರ್ ಹಾಗೂ ಅಮೆರಿಕದವರೇ ಆದ ಆಂಡ್ರೆ ಬೆರ್ಟೊ ನಡುವಿನ ಬಾಕ್ಸಿಂಗ್ ಪಂದ್ಯಕ್ಕೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ  ಮುಂದುವರೆದಿದೆ. ಇದು ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವೆಂದು ಮೇವೆದರ್ ಹೇಳಿದ್ದರೂ ಜನ ಪಂದ್ಯವನ್ನು ಹಣಕೊಟ್ಟು ನೋಡಲು ಆಸಕ್ತಿ ತೋರಿಲ್ಲ. ಹಾಗಾಗಿ, ಭಾರೀ ಆದಾಯ ನಿರೀಕ್ಷಿಸಲಾಗಿದ್ದ ಶನಿವಾರದ ಈ ಬಾಕ್ಸಿಂಗ್ ಸ್ಪರ್ಧೆಯ ಆಯೋಜಕರು ತೀವ್ರ ಹಿನ್ನೆಡೆ ಅನುಭವಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಅಂದಹಾಗೆ ಮೇವೆದರ್ ಈಗಾಗಲೇ ಇದೇ ತನ್ನ ಕೊನೆಯ ಬಾಕ್ಸಿಂಗ್ ಎಂದೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com