ಕೊರಿಯಾ ಓಪನ್‍ಗೆ ಸೈನಾ ಗೈರು

ಮುಂದಿನ ವಾರ ಆರಂಭಗೊಳ್ಳಲಿರುವ ಕೊರಿಯಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ವಿಶ್ವ ನಂಬರ್‍ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಹಿಂದೆ ಸರಿದಿದ್ದಾರೆ...
ಸೈನಾ ನೆಹ್ವಾಲ್ ಮತ್ತು ಜ್ವಾಲಾಗುಟ್ಟಾ (ಸಂಗ್ರಹ ಚಿತ್ರ)
ಸೈನಾ ನೆಹ್ವಾಲ್ ಮತ್ತು ಜ್ವಾಲಾಗುಟ್ಟಾ (ಸಂಗ್ರಹ ಚಿತ್ರ)

ಟೋಕಿಯೋ: ಮುಂದಿನ ವಾರ ಆರಂಭಗೊಳ್ಳಲಿರುವ ಕೊರಿಯಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ವಿಶ್ವ ನಂಬರ್‍ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ  ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಹಿಂದೆ ಸರಿದಿದ್ದಾರೆ.

ಸೆ. 15ರಿಂದ 20ರವರೆಗೆ ಆ ಟೂರ್ನಿ ನಡೆಯಲಿದೆ. ಇತ್ತೀಚೆಗಷ್ಟೇ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ ಪಡೆಯುವ ಮೂಲಕ ವಿಶ್ವ ರ್ಯಾಂಕಿಂಗ್‍ನಲ್ಲಿ ನಂಬರ್‍ಒನ್ ಪಟ್ಟಕ್ಕೇರಿರುವ  ಸೈನಾ ನೆಹ್ವಾಲ್, ಕೊರಿಯಾ ಓಪನ್ ಗೆ ಪ್ರವೇಶ ಅರ್ಜಿ ಸಲ್ಲಿಸಿಲ್ಲ. ಇನ್ನು, ಜ್ವಾಲಾ ಗುಟ್ಟಾ ಅವರು, ಜ್ವರದಿಂದ ಬಳಲುತ್ತಿದ್ದು, ಕೊರಿಯಾ ಓಪನ್‍ನಿಂದ ಹಿಂದೆ ಸರಿದಿದ್ದಾರೆ. ತಮಗೆ ಜ್ವರ, ಶೀತವಾಗಿದ್ದು ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಜ್ವಾಲಾ ಗುಟ್ಟಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com