11 ವರ್ಷ ಕೋಮಾದಲ್ಲಿದ್ದು ಎಚ್ಚೆತ್ತ ವ್ಯಕ್ತಿ ಮೊದಲು ವಿಚಾರಿಸಿದ್ದು ಫೆಡರರ್ ಬಗ್ಗೆ!

ಸ್ಪೇನ್ನಲ್ಲಿರುವ ಜೀಸಸ್ ಅಪರಿಸಿಯೋ ಎಂಬಾತ ಫೆಡರರ್ನ ಕಟ್ಟಾ ಅಭಿಮಾನಿ. ಕಾರು ಅಪಘಾತಕ್ಕೊಳಗಾಗಿ ಕಳೆದ 11 ವರ್ಷಗಳಿಂದ ಅಪರಿಸಿಯೋ ಕೋಮಾ ಸ್ಥಿತಿ...
ರೋಜರ್ ಫೆಡರರ್
ರೋಜರ್ ಫೆಡರರ್
ಸೇವಿಲ್ಲೇ (ಸ್ಪೇನ್): ಟೆನಿಸ್ ಲೋಕದ ದಿಗ್ಗಜ ಸ್ವಿಜರ್ಲ್ಯಾಂಡ್ನ ರೋಜರ್ ಫೆಡರರ್. ಟೆನಿಸ್ ಲೋಕದಲ್ಲಿ ಪ್ರಭುತ್ವ ಸಾಧಿಸಿದ ಮಹಾನ್ ಆಟಗಾರರಲ್ಲಿ ಫೆಡರರ್ ಕೂಡಾ ಒಬ್ಬರು. 17 ಗ್ರ್ಯಾಂಡ್ಸ್ಲಾಮ್ ಕಿರೀಟಗಳನ್ನು ಗೆದ್ದು ಕೊಂಡಿರುವ ಫೆಡರರ್ ಟೆನಿಸ್ ಲೋಕ ಕಂಡ ಅದ್ಭುತ ಆಟಗಾರ. ಆತನ ಖ್ಯಾತಿ ಮತ್ತು ಆತನ ಮೇಲಿರುವ ಅಭಿಮಾನ ಎಷ್ಟರ ಮಟ್ಟಿಗೆ ತೀವ್ರವಾಗಿದೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ.
ಸ್ಪೇನ್ನಲ್ಲಿರುವ  ಜೀಸಸ್ ಅಪರಿಸಿಯೋ ಎಂಬಾತ ಫೆಡರರ್ನ ಕಟ್ಟಾ ಅಭಿಮಾನಿ. ಕಾರು ಅಪಘಾತಕ್ಕೊಳಗಾಗಿ ಕಳೆದ 11 ವರ್ಷಗಳಿಂದ ಅಪರಿಸಿಯೋ ಕೋಮಾ ಸ್ಥಿತಿಯಲ್ಲಿದ್ದರು. ಸರಿಯಾಗಿ ಹೇಳುವುದಾದರೆ 2004 ಡಿಸೆಂಬರ್ 12ರಂದು ನಡೆದ ಅಪಘಾತದಲ್ಲಿ ಅಪರಿಸಿಯೋ ಕೋಮಾ ಸ್ಥಿತಿಗೆ ತಲುಪಿದ್ದರು. ಆ ಹೊತ್ತಲ್ಲಿ 4 ಗ್ರ್ಯಾಂಡ್ ಸ್ಲಾಮ್ ಕಿರೀಟಗಳನ್ನು ಗೆದ್ದಿದ್ದ 23ರ ಹರೆಯದ ಯುವಕನಾಗಿದ್ದರು ಫೆಡರರ್. ಅಪರಿಸಿಯೋ ಅಪಘಾತಕ್ಕೊಳಗಾದ ಅದೇ ವರ್ಷ ಫೆಡರರ್ ಮೂರು ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದು ಉತ್ತಮ ಫಾರ್ಮ್ನಲ್ಲಿದ್ದರು.
11 ವರ್ಷ ಕೋಮಾದಲ್ಲಿದ್ದ ಅಪರಿಸಿಯೋ ಮತ್ತೆ ಎಚ್ಚೆತ್ತುಕೊಂಡಿದ್ದು ಕಳೆದ ಆಗಸ್ಟ್ ತಿಂಗಳು 27ರಂದು. ಹಾಗೆ ಎಚ್ಚೆತ್ತ ಅಪರಿಸಿಯೋ ಮೊದಲು ವಿಚಾರಿಸಿದ್ದು ತನ್ನ ಪ್ರಿಯ ಆಟಗಾರ ಫೆಡರರ್ ಬಗ್ಗೆಯಾಗಿತ್ತು.  11 ವರ್ಷದ ಸುದೀರ್ಘ ಅವಧಿಯ ನಂತರ ಫೆಡರರ್ ಬಗ್ಗೆ ವಿಚಾರಿಸಿದಾಗ, ಆತ 17 ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾನೆ ಎಂಬ ಸುದ್ದಿ ಕೇಳಿ ಅಪರಿಸಿಯೋ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಇಷ್ಟು ವರ್ಷದಲ್ಲಿ ಫೆಡರರ್ ನಿವೃತ್ತಿ ಹೊಂದಿರಬಹುದು ಎಂದು ಭಾವಿಸಿದ್ದೆ. ಆದರೆ 34ನೇ ವಯಸ್ಸಿನಲ್ಲಿಯೂ ಫೆಡರರ್ ವಿಶ್ವ ನಂ.2 ನೇ ಸ್ಥಾನದಲ್ಲಿದ್ದಾರೆ ಎಂದು ಗೆಳೆಯರು ಹೇಳಿದಾಗ ನನಗಾದ ಸಂತಸ ಅಷ್ಟಿಷ್ಟಲ್ಲ ಎಂದು ಅಪರಿಸಿಯೋ ಹೇಳಿರುವುದನ್ನು ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com