ಕರ್ನಾಟಕದ ನಾಲ್ವರಿಗೆ ಸ್ಥಾನ
ನವದೆಹಲಿ: ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಹಾಕಿ ಲೀಗ್ ಫೈನಲ್ ಸುತ್ತಿನ ಟೂರ್ನಿಗೆ ಸಿದ್ಧತೆ ನಡೆಸಲು ಅಕ್ಟೋಬರ್ 2ರಿಂದ 11ರವರೆಗೆ ಆರು ಟೆಸ್ಟ್ ಪಂದ್ಯಗಳ ಸರಣಿಗೆ ಪ್ರವಾಸ ಮಾಡಲಿರುವ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಕರ್ನಾಟಕದ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬುಧವಾರ 21 ಆಟಗಾರರ ತಂಡದಲ್ಲಿ ಕರ್ನಾಟಕದ ವಿ.ಆರ್.ರಘುನಾಥ್, ನಿಕಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ ಹಾಗೂ ಆರ್.ವಿ.ಸುನೀಲ್ ಸ್ಥಾನ ಪಡೆದಿದ್ದು, ಸರ್ದಾರ್ ಸಿಂಗ್ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ. ಇನ್ನು ತಂಡದ ಸ್ಟ್ರೈಕರ್ ಆಟಗಾರ ಡ್ಯಾನಿಶ್ ಮುಜ್ತಾಬಾ ತಂಡದಿಂದ ಹೊರಗುಳಿದಿದ್ದಾರೆ. ಭಾರತ ತಂಡ ಪ್ರವಾಸದಲ್ಲಿ ಒಟ್ಟು 6 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಆ ಪೈಕಿ ಆರಂಭಿಕ 2 ಪಂದ್ಯಗಳನ್ನು ನ್ಯೂಜಿಲೆಂಡ್ ಎ ತಂಡದ ವಿರುದ್ಧ ಹಾಗೂ ಉಳಿದ ನಾಲ್ಕು ಪಂದ್ಯಗಳನ್ನು ಪ್ರಬಲ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ವಿರುದ್ಧ ಸೆಣಸಲಿದೆ.
ಇತ್ತೀಚೆಗೆ ಇಲ್ಲಿನ ಮೇಜರ್ ಧ್ಯಾನ್‍ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉನ್ನತ ಪ್ರದರ್ಶನ
ನಿರ್ದೇಶಕ ಹಾಗೂ ಮುಖ್ಯ ಕೋಚ್ ರೋಲಂಟ್ ಒಲ್ಟ್‍ಮನ್ಸ್ ಅವರ ಮಾರ್ಗದರ್ಶನದಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿನ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಯಿತು.
ತಂಡ ಇಂತಿದೆ:
ಗೋಲ್‍ಕೀಪರ್ಸ್: ಪಿ.ಆರ್.ಶ್ರೀಜೇಶ್ (ಉಪನಾಯಕ),ಹರ್ಜೋತ್ ಸಿಂಗ್, ಡಿಫೆಂಡರ್ಸ್: ಬಿರೇಂದರ್ ಲಕ್ರಾ, ಕೋತಾಜಿತ್ ಸಿಂಗ್, ವಿ.ಆರ್.ರಘುನಾಥ್, ಜಸ್ಜೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಗುರ್ಜಿಂದರ್ ಸಿಂಗ್ ಮಿಡ್ ಫೀಲ್ಡರ್ಸ್: ಸರ್ದಾರ್ ಸಿಂಗ್ (ನಾಯಕ), ಚಿಂಗ್ಲೆನ್‍ಸಾನ ಸಿಂಗ್, ಎಸ್.ಕೆ.ಉತ್ತಪ್ಪ¸ ಸತ್ಬೀರ್ ಸಿಂಗ್,ದೇವಿಂದರ್ ವಾಲ್ಮಿಕಿ, ಮನ್‍ಪ್ರೀತ್ ಸಿಂಗ್, ಧರಮ್ ವೀರ್ ಸಿಂಗ್, ಫಾರ್ವಡ್ಸ್ರ್: ಎಸ್.ವಿ. ಸುನೀಲ್, ರಮಣ್‍ದೀಪ್ ಸಿಂಗ್, ಆಕಾಶ್ ದೀಪ್, ಮಂದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ನಿಕಿನ್ ತಿಮ್ಮಯ್ಯ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ