
ದುಬೈ: ಕ್ರಿಕೆಟ್ ಕ್ರೀಡೆಯನ್ನು ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವಾಗಿಸಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು)ದ ಮುಖ್ಯಸ್ಥ ಸರ್ ರೋನಿ ಫ್ಲಾನಾಗನ್ ಹೇಳಿದ್ದಾರೆಂದು ಡಿಎನ್‍ಎ ವರದಿ ಮಾಡಿದೆ.
``ಸಮಾಜದಲ್ಲಿ ಅಪರಾಧವನ್ನು ಹೇಗೆ ಹತ್ತಿಕ್ಕಲು ಸಾಧ್ಯವಿಲ್ಲವೋ, ಕ್ರಿಕೆಟ್‍ನಲ್ಲಿನ ಭ್ರಷ್ಟಾಚಾರವನ್ನೂ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ'' ಎಂದವರು ಹೇಳಿದ್ದಾರೆ. ಕ್ರಿಕೆಟ್ ಅನ್ನು ಹೆಚ್ಚೆಚ್ಚು ಪಾರದರ್ಶಕ ವಾಗಿಸುವ ನಿಟ್ಟಿನಲ್ಲಿ ಬಿಸಿಸಿಐ ಸೇರಿದಂತೆ ಹಲವಾರು ದೇಶಗಳ ಕ್ರಿಕೆಟ್ ಮಂಡಳಿಗಳು ಶತಾಯಗತಾಯ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಫ್ಲಾನಾಗನ್ ರವರ ಈ ಹೇಳಿಕೆ ದಿಗ್ಭ್ರಮೆ ಹುಟ್ಟಿಸಿದೆ.
Advertisement