ಪಿಫಾ ಅಧ್ಯಕ್ಷ ಸೆಪ್ ಬ್ಲಾಟ್ಟರ್ (ಸಂಗ್ರಹ ಚಿತ್ರ)
ಕ್ರೀಡೆ
ಮಾಧ್ಯಮ ಭೀತಿಯಲ್ಲಿ ಸೆಪ್ ಬ್ಲಾಟರ್
ಅಮೆರಿಕ ಹಾಗೂ ಸ್ವಿಜರ್ಲೆಂಡ್ ಸರ್ಕಾರದ ವತಿಯಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಪಿಫಾ) ಹಗರಣಗಳ ತನಿಖೆ ಆರಂಭವಾದ ಮೇಲೆ, ಪಿಫಾ ನಿರ್ಗಮಿತ ಅಧ್ಯಕ್ಷ ಸೆಪ್ ಬ್ಲಾಟರ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಲಿದ್ದಾರೆ. ..
ಜ್ಯೂರಿಚ್: ಅಮೆರಿಕ ಹಾಗೂ ಸ್ವಿಜರ್ಲೆಂಡ್ ಸರ್ಕಾರದ ವತಿಯಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಪಿಫಾ) ಹಗರಣಗಳ ತನಿಖೆ ಆರಂಭವಾದ ಮೇಲೆ, ಪಿಫಾ ನಿರ್ಗಮಿತ ಅಧ್ಯಕ್ಷ ಸೆಪ್ ಬ್ಲಾಟರ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಲಿದ್ದಾರೆ.
ಪಿಫಾದ ಎರಡು ದಿನಗಳ ಕಾರ್ಯಕಾರಿಣಿ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಬ್ಲಾಟರ್ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಮಯಕ್ಕಾಗಿ ಹಲವಾರು ತಿಂಗಳುಗಳಿಂದ ಮಾಧ್ಯಮಗಳೂ ಕಾಯುತ್ತಿದ್ದು, ಮೊಗೆದಷ್ಟೂ ಮುಗಿಯದಂತಿರುವ ಹಗರಣಗಳ ಬಗ್ಗೆ ಬ್ಲಾಟರ್ ಅವನ್ನು ಪ್ರಶ್ನಿಸಲು ತುದಿಗಾಲಲ್ಲಿ ನಿಂತಿರುವುದು ಅವರನ್ನು ಕಂಗೆಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ