ಅಭ್ಯಾಸದ ವೇಳೆ ಸ್ಟುವರ್ಟ್ ಬಿನ್ನಿ ಮತ್ತು ಅರವಿಂದ್ ಛಾಯಾಗ್ರಾಹಕರಿಗೆ ಫೋಸು ನೀಡಿದರು. ಅಭಿಮಾನಿಯೊಬ್ಬ ಭುವನೇಶ್ವರ್ ಅವರಿಂದ ಹಸ್ತಾಕ್ಷರ ಪಡೆಯುತ್ತಿರುವುದು.
ಅಭ್ಯಾಸದ ವೇಳೆ ಸ್ಟುವರ್ಟ್ ಬಿನ್ನಿ ಮತ್ತು ಅರವಿಂದ್ ಛಾಯಾಗ್ರಾಹಕರಿಗೆ ಫೋಸು ನೀಡಿದರು. ಅಭಿಮಾನಿಯೊಬ್ಬ ಭುವನೇಶ್ವರ್ ಅವರಿಂದ ಹಸ್ತಾಕ್ಷರ ಪಡೆಯುತ್ತಿರುವುದು.

ಬಾಂಗ್ಲಾಗೆ ಧವನ್ ಪಡೆಯ ಸವಾಲು

ಮೊದಲಿಗೆ ಏಕದಿನ, ಆನಂತರ ಮೂರು ದಿನಗಳ ಟೆಸ್ಟ್ ಪಂದ್ಯದಲ್ಲಿ ಸೋತು ಸುಣ್ಣವಾಗಿರುವ ಪ್ರವಾಸಿ ಬಾಂಗ್ಲಾದೇಶ...

ಬೆಂಗಳೂರು: ಮೊದಲಿಗೆ ಏಕದಿನ, ಆನಂತರ ಮೂರು ದಿನಗಳ ಟೆಸ್ಟ್ ಪಂದ್ಯದಲ್ಲಿ ಸೋತು ಸುಣ್ಣವಾಗಿರುವ ಪ್ರವಾಸಿ ಬಾಂಗ್ಲಾದೇಶ `ಎ' ತಂಡಕ್ಕೀಗ ಶಿಖರ್ ಧವನ್ ನಾಯಕತ್ವದ ಭಾರತ `ಎ' ತಂಡದ ಸವಾಲು ಎದುರಾಗಿದೆ.

ಉನ್ಮುಕ್ತ್ ಚಾಂದ್ ಸಾರಥ್ಯದ ಭಾರತ ಎ ತಂಡದ ವಿರುದ್ಧ ನಡೆದ ಮೂರು ಅನಧಿಕೃತ ಏಕದಿನ ಸರಣಿಯಲ್ಲಿ 1-2ರಿಂದ ಸೋಲನುಭವಿಸಿದ ಮೊಮಿನಲ್ ಹಕ್ ಪಡೆ ಮೈಸೂರಿನಲ್ಲಿ ನಡೆದ ಮೂರು ದಿನಗಳ ಟೆಸ್ಟ್ ಪಂದ್ಯದಲ್ಲಿ ಯುವ ಕರ್ನಾಟಕಕ್ಕೆ ಶರಣಾಗಿತ್ತು. ಹೀಗಾಗಿ ಇಂದಿನಿಂದ ಆರಂಭವಾಗಲಿರುವ ಈ ಮೂರು ದಿನಗಳ ಪಂದ್ಯದಲ್ಲಿಯಾದರೂ ಉತ್ತಮ ಪ್ರದರ್ಶನ ನೀಡಿ ಭಾರತ ಪ್ರವಾಸವನ್ನು ಸಮಾಧಾನಕರವಾಗಿ ಮುಗಿಸುವ ಇರಾದೆ ಹೊಂದಿದೆ.

ಇನ್ನು ಭಾರತ ಎ ತಂಡವನ್ನು ಮುನ್ನಡೆಸುತ್ತಿರುವ ಆರಂಭಿಕ ಶಿಖರ್ ಧವನ್ ಪಾಲಿಗೆ ಈ ಪಂದ್ಯ ತನ್ನ ದೈಹಿಕ ಕ್ಷಮತೆಯನ್ನು ಪರೀಕ್ಷೆಗೊಡ್ಡುವ ವೇದಿಕೆಯಾಗಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದರ ಹಿಂದೊಂದರಂತೆ ಶತಕ ಸಿಡಿಸಿ ಗಮನ ಸೆಳೆದಿದ್ದ ಧವನ್, ಗಾಲೆ ಟೆಸ್ಟ್ ಸಂದರ್ಭದಲ್ಲಿ ಫೀಲ್ಡಿಂಗ್ ನಿರತವಾಗಿದ್ದಾಗ ಕೈಗೆ ಗಾಯಮಾಡಿಕೊಂಡು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ವಿಶ್ರಾಂತಿ ಪಡೆದಿದ್ದರು.ರೂಬೇಲ್ ಹುಸೇನ್ ಮತ್ತು ಅಲ್-ಅಮೀನ್ ಹುಸೇನ್‍ರಂತಹ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೇ ಆದಲ್ಲಿ ಮುಂದಿನ ತಿಂಗಳು ಅಕ್ಟೋಬರ್ 2ರಿಂದ ಶುರುವಾಗಲಿರುವ ದ.ಆಫ್ರಿಕಾ ವಿರುದ್ಧದ ಚುಟುಕು ಸರಣಿಯಲ್ಲೂ ಧವನ್ ಉತ್ತಮ ಪ್ರದರ್ಶನ ನೀಡುವುದರಲ್ಲಿ ಸಂದೇಹವಿಲ್ಲ. ಇತ್ತ ಏಕದಿನ ತಂಡದಿಂದ ಕೈಬಿಡಲ್ಪಟ್ಟಿರುವ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತೆ ಆಯ್ಕೆದಾರರ ಗಮನ ಸೆಳೆಯಲು ಈ ಮೂರು ದಿನಗಳ ಪಂದ್ಯದಲ್ಲಿ ಯಶಸ್ವಿ ಪ್ರದರ್ಶನ ನೀಡಬೇಕಾಗಿದೆ.

ಏತನ್ಮಧ್ಯೆ ಕರ್ನಾಟಕದಿಂದ ಕರುಣ್ ನಾಯರ್, ಅಭಿಮನ್ಯು ಮಿಥುನ್ ಹಾಗೂ ಶ್ರೇಯಸ್ ಗೋಪಾಲ್ ಸ್ಥಾನ ಪಡೆದಿದ್ದು, ರಾಜ್ಯದ ಈ ಮೂವರು ಆಟಗಾರರ ಮೇಲೂ ಆಯ್ಕೆ ಸಮಿತಿ  ಮಾತ್ರವಲ್ಲದೆ, ಟೀಂ ಇಂಡಿಯಾ ನಿರ್ದೇಶಕ ಗಮನ ಹರಿಸಿದ್ದಾರೆ. ಎ ತಂಡದಲ್ಲಿನ ಪ್ರತಿಭಾನ್ವಿತ ಆಟಗಾರರ ಕುರಿತು ಕೋಚ್ ರಾಹುಲ್ ದ್ರಾವಿಡ್ ಜತೆಗೆ ಚರ್ಚೆ ನಡೆಸುತ್ತೇನೆ ಎಂದು ಮೊನ್ನೆಯಷ್ಟೇ ಶಾಸ್ತ್ರಿ ನುಡಿದಿದ್ದರು. ಮೇಲಾಗಿ ರಣಜಿ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿರುವ ದಿಸೆಯಲ್ಲಿ ಈ ಮೂವರು ಆಟಗಾರರ ಮೇಲೂ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
 
ತಂಡಗಳು
ಭಾರತ ಎ: ಶಿಖರ್ ಧವನ್ (ನಾಯಕ), ಅಭಿನವ್ ಮುಕುಂದ್, ಕರುಣ್ ನಾಯರ್, ಶ್ರೇಯಸ್ ಐಯರ್, ಬಾಬಾ ಅಪರಾಜಿತ್, ನಮನ್ ಓಜಾ (ವಿಕೆಟ್‍ಕೀಪರ್), ಜಯಂತ್ ಯಾದವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ವರುಣ್ ಏರಾನ್, ಈಶ್ವರ್ ಪಾಂಡೆ, ಶೆಲ್ಡಾನ್ ಜಾಕ್ಸನ್.

ಬಾಂಗ್ಲಾದೇಶ ಎ: ಮೊಮಿನಲ್ ಹಕ್ (ನಾಯಕ), ನಾಸಿರ್ ಹುಸೇನ್ (ಉಪನಾಯಕ), ಅನಮುಲ್ ಹಕ್, ರೂಬೆಲ್ ಹುಸೇನ್, ಶುವಾಗತ ಹಾಮ್, ಲಿಟನ್ ದಾಸ್, ಶಬ್ಬೀರ್ ರೆಹಮಾನ್, ಸಕ್ಲೇನ್ ಸಾಜಿಬ್, ಸೌಮ್ಯ ಸರ್ಕಾರ್, ಕಮ್ರುಲ್ ಇಸ್ಲಾಮ್ ರಬ್ಬಿ, ಅಲ್-ಅಮೀನ್ ಹುಸೇನ್, ಶಫೀಯುಲ್ ಇಸ್ಲಾಮï, ರೋನಿ ತಾಲೂಕ್ದಾರ್, ಅರಾಫತ್ ಸನ್ನಿ ಮತ್ತು ಜುಬೇರ್ ಹುಸೇನ್.
ಪಂದ್ಯ ಆರಂಭ: ಬೆಳಿಗ್ಗೆ 9.30

Related Stories

No stories found.

Advertisement

X
Kannada Prabha
www.kannadaprabha.com