ಸಲ್ಮಾನ್ ಖಾನ್
ಕ್ರೀಡೆ
ರಿಯೋ ಒಲಂಪಿಕ್ಸ್ 2016: ಸಲ್ಮಾನ್ ಖಾನ್ ಸೌಹಾರ್ದ ರಾಯಭಾರಿ ?
2016 ರ ರಿಯೋ ಒಲಂಪಿಕ್ಸ್ ಗೆ ನಟ ಸಲ್ಮಾನ್ ಖಾನ್ ಭಾರತದ ಸೌಹಾರ್ದ ರಾಯಭಾರಿಯಾಗಿ ನೇಮಕವಾಗುವ ಸಾಧ್ಯತೆಯಿದೆ...
ನವದೆಹಲಿ: 2016 ರ ರಿಯೋ ಒಲಂಪಿಕ್ಸ್ ಗೆ ನಟ ಸಲ್ಮಾನ್ ಖಾನ್ ಭಾರತದ ಸೌಹಾರ್ದ ರಾಯಭಾರಿಯಾಗಿ ನೇಮಕವಾಗುವ ಸಾಧ್ಯತೆಯಿದೆ.
50 ವರ್ಷದ ಸಲ್ಮಾನ್ ಖಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರೀಡಾ ಸಮುದಾಯವನ್ನು ಪ್ರತಿನಿಧಿಸಲಿದ್ದಾರೆ. ಸಲ್ಮಾನ್ ಖಾನ್ ನೇಮಕ ವಾಗಿದ್ದು. ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
2012 ರಲ್ಲಿ ನಡೆದ ಲಂಡನ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಮೆರಿ ಕೋಮ್, ಸರ್ದಾರ್ ಸಿಂಗ್, ರೀತು ರಾಣಿ, ಆರ್ಚರಿ ಅಪೂರ್ವಿ ಚಂಡೀಲಾ, ಮಣಿಕಾ ಬಾತ್ರಾ ಇವರ ಮುಂದೆ ಸಲ್ಮಾನ್ ಖಾನ್ ರಾಯಭಾರಿಯಾಗಿರುವುದನ್ನು ಹೇಳಲಾಗಿದೆ. ಭಾರತೀಯ ಮಹಿಳಾ ಹಾಕಿ ತಂಡ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ