ರಿಯೋ ಒಲಿಂಪಿಕ್ಸ್ ಗಾಗಿ ಮತ್ತೆ ಒಂದಾಗಲಿರುವ ಪೇಸ್-ಭೂಪತಿ ಜೋಡಿ

ಒಂದು ಕಾಲದ ಭಾರತದ ಯಶಸ್ವಿ ಡಬಲ್ಸ್ ಜೋಡಿ ಎಂದು ಖ್ಯಾತಿ ಗಳಿಸಿದ್ದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ತಮ್ಮ ನಡುವಿನ ವೈಮನಸ್ಸನ್ನು ಮರೆತು ರಿಯೋ ಒಲಿಂಪಿಕ್ಸ್ ನಲ್ಲಿ ಮತ್ತೆ ಒಂದಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ..
ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ (ಸಂಗ್ರಹ ಚಿತ್ರ)
ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ (ಸಂಗ್ರಹ ಚಿತ್ರ)

ನವದೆಹಲಿ: ಒಂದು ಕಾಲದ ಭಾರತದ ಯಶಸ್ವಿ ಡಬಲ್ಸ್ ಜೋಡಿ ಎಂದು ಖ್ಯಾತಿ ಗಳಿಸಿದ್ದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ತಮ್ಮ ನಡುವಿನ ವೈಮನಸ್ಸನ್ನು ಮರೆತು ರಿಯೋ  ಒಲಿಂಪಿಕ್ಸ್ ನಲ್ಲಿ ಮತ್ತೆ ಒಂದಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇತ್ತೀಚೆಗೆ ಮುಂಬೈನಲ್ಲಿ ಭೇಟಿಯಾಗಿದ್ದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಮತ್ತೆ ಒಟ್ಟಾಗಿ  ಕಣಕ್ಕಿಳಿಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಒಂದು ಕಾಲದ ಭಾರತದ ಅತ್ಯಂತ ಯಶಸ್ವೀ ಡಬಲ್ಸ್ ಜೋಡಿ ಎಂದು ಖ್ಯಾತಿ ಗಳಿಸಿದ್ದ ಪೇಸ್-ಭೂಪತಿ ಜೋಡಿ ತಮ್ಮ ನಡುವಿನ  ವೈಮನಸ್ಯದಿಂದಾಗಿ ಪರಸ್ಪರ ಬೇರೆಯಾಗಿದ್ದರು.

ಇದೀಗ ತಮ್ಮ ನಡುವಿನ ದೀರ್ಘಕಾಲದ ವೈಷ್ಯಮಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಜೋಡಿ ರಿಯೋ ಒಲಿಂಪಿಕ್ಸ್ ನಲ್ಲಿ ಒಂದಾಗಿ ದೇಶವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಅಂತೆಯೇ ರಿಯೋ  ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಮೂಲಕ ಸತತ 7 ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಏಕೈಕ ಟೆನಿಸ್ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲು ಪೇಸ್ ಸಿದ್ಧತೆ ನಡೆಸಿದ್ದಾರೆ.

2012ರಲ್ಲಿ ಲಂಡನ್​ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೇ ಈ ಜೋಡಿ ಒಂದಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಆ ಟೂರ್ನಿಯಲ್ಲಿ ಇಬ್ಬರು ಒಟ್ಟಿಗೆ ಆಡಿರಲಿಲ್ಲ.  ಭೂಪತಿ ಮತ್ತು ರೋಹನ್ ಭೋಪಣ್ಣ ಜೋಡಿ 2012ರ ಒಲಿಂಪಿಕ್ಸ್​ನಲ್ಲಿ ಕಣದಿಂದ ಹಿಂದೆ ಸರಿದಿದ್ದ ಕಾರಣ ಪೇಸ್ ಮತ್ತು ವಿಷ್ಣುವರ್ಧನ್ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಪೇಸ್  1996ರ ಅಟ್ಲಾಂಟಾ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿದ್ದರು. ಪೇಸ್ ಮತ್ತು ಮಹೇಶ್ ಭೂಪತಿ 1999ರಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್​ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು ಮತ್ತು ಯುಎಸ್ ಓಪನ್  ಮತ್ತು ಆಸ್ಟ್ರೇಲಿಯನ್ ಓಪನ್​ನ ಫೈನಲ್ಸ್ ಪ್ರವೇಶಿಸಿದ್ದರು. 2001ರಲ್ಲಿ ಈ ಜೋಡಿ ಮತ್ತೆ ಫ್ರೆಂಚ್ ಓಪನ್ ಗೆದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com