ರಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ: ಒಲಿಂಪಿಕ್ಸ್‌ಗೆ ಫುಟ್ಬಾಲ್ ದಿಗ್ಗಜ ಪೀಲೆರಿಂದ ಚಾಲನೆ

ಜಗತ್ತೇ ಎದುರು ನೋಡುತ್ತಿರುವ ರಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ ಶುರುವಾಗಿದ್ದು ಬ್ರೆಜಿಲ್ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ...
ರಿಯೋ ಒಲಿಂಪಿಕ್ಸ್
ರಿಯೋ ಒಲಿಂಪಿಕ್ಸ್

ಜಗತ್ತೇ ಎದುರು ನೋಡುತ್ತಿರುವ ರಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ ಶುರುವಾಗಿದ್ದು ಬ್ರೆಜಿಲ್ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಬ್ರೆಜಿಲ್ ನ ಮರಕಾನ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಮಾರು 6 ಸಾವಿರ ಕಲಾವಿದರು ಭಾಗಿಯಾಗಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಸುಮಾರು 78 ಸಾವಿರ ಜನ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ.

31ನೇ ಆವೃತ್ತಿಯ ಒಲಿಂಪಿಕ್ಸ್ ಗೆ ರಿಯೋ ಸಜ್ಜಾಗಿದ್ದು, ಫುಟ್ಬಾಲ್ ದಿಗ್ಗಜ ಪೀಲೆ ಅವರು ಒಲಿಂಪಿಕ್ಸ್ ಜ್ಯೋತಿ ಬೆಳಗುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ 17 ದಿನಗಳ ಕ್ರೀಡಾಸ್ಪರ್ಧೆಗೆ ಚಾಲನೆ ಸಿಗಲಿದೆ. ಇನ್ನು ಬ್ರೆಜಿಲ್ ನ ಕಾರ್ನಿವಾಲ್, ಸಾಂಬಾ ನೃತ್ಯಗಳು ಸಮಾರಂಭದ ಹೈಲೈಟ್.

ರಿಯೋ ಒಲಿಂಪಿಕ್ಸ್ ನಲ್ಲಿ 28 ಕ್ರೀಡೆಗಳಿದ್ದು, 37 ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಈ ಭಾರೀ 208 ದೇಶಗಳಲ್ಲಿ ಒಲಿಂಪಿಕ್ಸ್ ನಲ್ಲಿ ಪಾಲ್ಗೋಳಲಿವೆ. ಇನ್ನು ಕ್ರೀಡಾಕೂಟದಲ್ಲಿ 11,239 ಕ್ರೀಡಾಪುಟಗಳು ಭಾಗವಹಿಸಲಿದ್ದಾರೆ.

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದಿಂದ 118 ಕ್ರೀಡಾಪುಟಗಳು ಭಾಗವಹಿಸಲಿದ್ದಾರೆ. 15 ಕ್ರೀಡೆಗಳಲ್ಲಿ ಭಾರತ ಸ್ಪರ್ಧಿಸಲಿದೆ. ಆರಂಭೋತ್ಸವದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಶೂಟರ್‌ ಅಭಿನವ್ ಬಿಂದ್ರಾ ಹಿಡಿದು ಮುನ್ನಡೆಯಲಿದ್ದಾರೆ. ಭಾರತ ಕಾಲಮಾನ ಪ್ರಕಾರ ಆಗಸ್ಟ್ 6 ಬೆಳಗ್ಗೆ 4.20 ಸುಮಾರಿಗೆ ಉದ್ಘಾಟನೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com