ಒಲಿಂಪಿಕ್ಸ್‌ನಲ್ಲಿ 21ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೈಕಲ್ ಫೆಲ್ಪ್ಸ್

ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕಲ್ ಫೆಲ್ಪ್ಸ್ ಅವರು ಒಲಿಂಪಿಕ್ಸ್ ನಲ್ಲಿ ಒಟ್ಟಾರೆ 21 ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ...
ಮೈಕಲ್ ಫೆಲ್ಪ್ಸ್
ಮೈಕಲ್ ಫೆಲ್ಪ್ಸ್

ರಿಯೋ ಡಿ ಜನೈರೋ: ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕಲ್ ಫೆಲ್ಪ್ಸ್ ಅವರು ಒಲಿಂಪಿಕ್ಸ್ ನಲ್ಲಿ ಒಟ್ಟಾರೆ 21 ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

4X200 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಫೆಲ್ಪ್ಸ್ ಚಿನ್ನದ ಬೇಟೆಯಲ್ಲಿ ಯಶಸ್ವಿಯಾಗಿದ್ದಾರೆ.

ಮೈಕೆಲ್ ಫೆಲ್ಪ್ಸ್ 2004ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ 6, 2008ರ ಬೀಜಿಂಗ್ ನಲ್ಲಿ 8 ಮತ್ತು 2012ರ ಲಂಡನ್ ನಲ್ಲಿ 4 ಚಿನ್ನದ ಪದಕ ಗಳಿಸಿದ್ದಾರೆ. ಇದೀಗ ರಿಯೋ ಒಲಿಂಪಿಕ್ಸ್ ನಲ್ಲಿ 3 ಚಿನ್ನದ ಪದಕ ಜಯಿಸಿದ್ದಾರೆ.

ಮೈಕಲ್ ಫೆಲ್ಪ್ಸ್ ಈ ಮೂಲಕ ಒಲಿಂಪಿಕ್ಸ್ ನಲ್ಲಿ ಒಟ್ಟು 21 ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com