ರಿಯೋ ಆರ್ಚರಿ: ಭಾರತದ ಬೊಂಬಾಲ್ಯ ದೇವಿ ಕ್ವಾರ್ಟರ್ ಫೈನಲ್ ಗೆ ಆಯ್ಕೆ

ರಿಯೋ ಒಲಂಪಿಕ್ಸ್ ನ ಆರ್ಚರಿ ವಿಭಾಗದಲ್ಲಿ ಭಾರತೀಯ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಆಸ್ಟ್ರಿಯಾದ ಲಾರೆನ್ಸ್ ಬಲ್ಡುಫ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೆ ಆಯ್ಕೆಯಾಗಿದ್ದಾರೆ.
ಬೊಂಬಾಲ್ಯ ದೇವಿ
ಬೊಂಬಾಲ್ಯ ದೇವಿ

ರಿಯೋ ಡಿ ಜನೈರೊ: ರಿಯೋ ಒಲಂಪಿಕ್ಸ್ ನ ಆರ್ಚರಿ ವಿಭಾಗದಲ್ಲಿ ಭಾರತೀಯ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಆಸ್ಟ್ರಿಯಾದ ಲಾರೆನ್ಸ್ ಬಲ್ಡುಫ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೆ ಆಯ್ಕೆಯಾಗಿದ್ದಾರೆ.

ವೈಯಕ್ತಿಯ ವಿಭಾಗದಲ್ಲಿ ಆಸ್ಟ್ರಿಯಾದ ಲಾರೆನ್ಸ್ ಅವರನ್ನು ಎದುರಿಸಿದ್ದ ಬೊಂಬಾಲ್ಯ ದೇವಿ, 24-27, 28-24, 27-23, 26-24 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕ್ವಾರ್ಟರ್ ಫೈನಲ್ ಗೆ ಆಯ್ಕೆಯಾಗಿರುವ ಬೊಂಬಾಲ್ಯ ದೇವಿ ತೈಪೆಯ ಶಿಹ್-ಚಿಯಾರನ್ನು ಎದುರಿಸಲಿದ್ದಾರೆ.

50 ಎಂ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಸೋತ ಜಿತು, ಪ್ರಕಾಶ್

ಶೂಟರ್ ಗಳಾದ ಜಿತು ರೈ ಹಾಗೂ ಪ್ರಕಾಶ್ ನಂಜಪ್ಪ ಪುರುಷರ ವಿಭಾಗದ 50 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಸೋತಿದ್ದಾರೆ. ಜಿತು ರೈ 6 ನೇ ಸುತ್ತಿನಲ್ಲಿ ಸೋಲು ಕಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಶೂಟರ್ ಜಾಂಗ್ ಜಿನ್ ಆಯ್ಕೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಚೀನಾದ ವೈ ಪಾಂಗ್ ಹಾಗೂ ದಕ್ಷಿಣ ಕೊರಿಯಾದ ಮತ್ತೋರ್ವ ಆಟಗಾರ ಸ್ಯುಂಗ್ ವೂ ಹಾನ್ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com