
ರಿಯೋ ಡಿ ಜನೈರೋ: ಭಾರತದ ಅಥ್ಲೀಟ್ ಲಲಿತಾ ಬಾಬರ್ ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ ನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಒಲಿಂಪಿಕ್ಸ್ ಅಥ್ಲೆಟಿಕ್ಸ್ನ 2ನೇ ದಿನ ಭಾರತದ ಅಥ್ಲೀಟ್ ಲಲಿತಾ ಬಾಬರ್ ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ ಹೀಟ್ಸ್ ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಒಟ್ಟಾರೆ 7ನೇ ಸ್ಥಾನ ಪಡೆದರು. ಆ ಮೂಲಕ ಲಲಿತಾ ಬಾಬರ್ ಮೂಲಕ ಪ್ರವೇಶಿಸಿದ್ದು, ಒಲಿಂಪಿಕ್ಸ್ ಅಥ್ಲೆಟಿಕ್ಸ್ನಲ್ಲಿ ಫೈನಲ್ಗೇರಿದ ಭಾರತದ 7ನೇ ಅಥ್ಲೀಟ್ ಎನಿಸಿಕೊಂಡರು. ಹೀಟ್ಸ್ನಲ್ಲಿ 9ನಿಮಿಷ ಮತ್ತು 19.76 ಸೆಕೆಂಡ್ಗಳಲ್ಲಿ 4ನೇ ಸ್ಥಾನ ಸಂಪಾದಿಸಿದರು. ಅ ಮೂಲಕ ಈ ಹಿಂದೆ ಸುಧಾ ಸಿಂಗ್ ನಿರ್ಮಿಸಿದ್ದ (9ನಿ:26.55ಸೆಂ.) ಪ್ರಸಕ್ತ ವರ್ಷ ಶಾಂಘೈನಲ್ಲಿ ನಿರ್ವಿುಸಿದ್ದ ರಾಷ್ಟ್ರೀಯ ದಾಖಲೆಯನ್ನು ಲಲಿತಾ ಬಾಬರ್ ಮುರಿದರು.
ಇದೇ ಪಂದ್ಯದಲ್ಲಿ ಅನುಭವಿ ಸುಧಾ ಸಿಂಗ್ ಅವರು ಹೀಟ್ಸ್ನಲ್ಲಿ 9ನಿ:43.55ಸೆಂ ನಲ್ಲಿ ಗುರಿ ತಲುಪುವ ಮೂಲಕ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು.
Advertisement