23ನೇ ಚಿನ್ನದ ಪದಕದೊಂದಿಗೆ ಒಲಿಂಪಿಕ್ಸ್ ಗೆ ವಿದಾಯ ಹೇಳಿದ ಮೈಕೆಲ್ ಫೆಲ್ಪ್ಸ್

ಅಮೆರಿಕದ ಖ್ಯಾತ ಈಜು ದಂತಕಥೆ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಕೊನೆಯ ಅಂದರೆ 23ನೇ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಗೆ ವಿದ್ಯುಕ್ತ ವಿದಾಯ ಹೇಳಿದ್ದಾರೆ.
ಒಲಿಂಪಿಕ್ಸ್ ಗೆ ನಿವೃತ್ತಿ ಘೋಷಿಸಿದ ಮೈಕೆಲ್ ಫೆಲ್ಪ್ಸ್
ಒಲಿಂಪಿಕ್ಸ್ ಗೆ ನಿವೃತ್ತಿ ಘೋಷಿಸಿದ ಮೈಕೆಲ್ ಫೆಲ್ಪ್ಸ್

ರಿಯೋ ಡಿ ಜನೈರೋ: ಅಮೆರಿಕದ ಖ್ಯಾತ ಈಜು ದಂತಕಥೆ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಕೊನೆಯ ಅಂದರೆ 23ನೇ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಗೆ ವಿದ್ಯುಕ್ತ  ವಿದಾಯ ಹೇಳಿದ್ದಾರೆ.

ಅಮೆರಿಕದ ಖ್ಯಾತ ಈಜುಪಟು ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ಗೆ ವಿದಾಯ ಹೇಳಿದ್ದು, ಶನಿವಾರ ನಡೆದ ತಮ್ಮ ಅಂತಿಮ ಪಂದ್ಯದಲ್ಲೂ ಚಿನ್ನದ ಭೇಟೆಯಾಡುವ ಮೂಲಕ 31 ವರ್ಷದ ಫೆಲ್ಪ್ಸ್  ವಿದ್ಯುಕ್ತವಾಗಿ ಒಲಿಂಪಿಕ್ಸ್ ಗೆ ವಿದಾಯ ಹೇಳಿದ್ದಾರೆ. ಶನಿವಾರ ನಡೆದ 4x100 ಮಿಡ್ಲ್ ರಿಲೇ ಪಂದ್ಯದಲ್ಲಿ ಫೆಲ್ಸ್ಪ್ ದಾಖಲೆ ಸಮಯದಲ್ಲಿ ಗುರಿ ಮುಟ್ಟುವ ಮೂಲಕ ಮತ್ತೊಂದು ದಾಖಲೆ ಬರೆದರು.  ಕೇವಲ 3 ನಿಮಿಷ 27.95 ಸೆಕೆಂಡ್ ಗಳಲ್ಲಿ ಫೆಲ್ಪ್ಸ್ ಗುರಿ ಮುಟ್ಟಿದರು.

ಗೆಲುವು ಸಾಧಿಸುತ್ತಿದ್ದಂತೆಯೇ ತಮ್ಮ ಅಭಿಮಾನಿಗಳತ್ತ ಕೈಬೀಸಿ ಕರೆದ ಮೈಕೆಲ್ ಫೆಲ್ಪ್ಸ್ ಭಾವುಕರಾದರು. ಈ ವೇಳೆ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅವರ ಪತ್ನಿ ನಿಕೋಲ್  ಜಾನ್ಸನ್ ಮತ್ತು ತಾಯಿ ಡೆಬೋರಾ ಅವರು ಕಣ್ಣೀರಿಟ್ಟಿದ್ದು, ಅಲ್ಲಿ ನೆರೆದಿದ್ದ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿತ್ತು. ಈ ವೇಳೆ ತಮ್ಮ ದೇಶದ ಇತರೆ ಈಜು ಪಟುಗಳನ್ನು ಅಪ್ಪಿಕೊಂಡ ಫೆಲ್ಪ್ಸ್  ಒಲಿಂಪಿಕ್ಸ್ ಗೆ ವಿದಾಯ ಹೇಳಿದರು.

ಬಳಿಕ ನಡೆದ ಪದಕ ಪ್ರಧಾನ ಸಮಾರಂಭದಲ್ಲಿ ಚಿನ್ನದ ಪದಕ ಸ್ವೀಕರಿಸಿ ಅಮೆರಿಕದ ರಾಷ್ಟ್ರಧ್ವಜವನ್ನು ಮೈಮೇಲೆ ಹೊದ್ದು ಮಾತನಾಡಿದ ಫೆಲ್ಪ್ಸ್, ನಿವೃತ್ತಿ ಕುರಿತು ಚಿಂತಿಸಿದ್ದೆ. ಆದರೆ ಹೇಗೆ  ನಿವೃತ್ತಿ ಘೋಷಿಸಬೇಕು ಎಂದು ಯೋಚಿಸಿರಲಿಲ್ಲ. ಆದರೆ ಇಂದು ಇಲ್ಲಿ ನನಗೆ ದೊರೆತ ಗೌರವವನ್ನು ನಾನು ನನ್ನ ಜೀವನದಲ್ಲಿಯೇ ಮರೆಯುವುದಿಲ್ಲ. ಅಭಿಮಾನಿಗಳು ನನ್ನ ಮೇಲಿಟ್ಟಿರುವ  ಪ್ರೀತಿಗೆ ನಾನು ಆಭಾರಿ. ನನ್ನ ಪತ್ನಿಗೆ ಗಂಡನಾಗಿ ನನ್ನ ಮಗುವಿಗೆ ತಂದೆಯಾಗಿ ಕರ್ತವ್ಯ ನಿರ್ವಹಿಸುವ ಹೊಸ ಜವಾಬ್ದಾರಿ ನನ್ನ ಮೇಲಿದೆ. ಜೀವನದಲ್ಲಿನ ಮುಂದಿನ ಸವಾಲುಗಳ ಎದುರಿಸಲು  ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಫೆಲ್ಪ್ಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com