
ರಿಯೋ ಡಿ ಜನೈರೊ (ಬ್ರೆಜಿಲ್): ರಿಯೋ ಒಲಿಂಪಿಕ್ಸ್ 2016ರಲ್ಲಿ ಚಿನ್ನದ ಪದಕ ಗೆದ್ದು ಬರುವ ಭಾರತೀಯ ಅಥ್ಲೀಟ್ಸ್ ಗಳಿಗೆ ರು. 6 ಕೋಟಿ ಬಹುಮಾನ ನೀಡುವುದಾಗಿ ಹರಿಯಾಣ ಕ್ರೀಡಾ ಸಚಿವ ಅನಿಲ್ ವಿಜ್ ಘೋಷಣೆ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಅಥ್ಲೀಟ್ಸ್ ಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನಿಲ್ ವಿಜ್ ಅವರು ನಿನ್ನೆಯಷ್ಟೇ ರಿಯೋ ಡಿ ಜನೈರೊಗೆ ಭೇಟಿ ನೀಡಿದ್ದರು.
ಭೇಟಿ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತೀಯ ಅಥ್ಲೀಟ್ಸ್ ಗಳಿಗೆ ನೈತಿಕ ಸ್ಥೈರ್ಯ ಹಾಗೂ ಪ್ರೋತ್ಸಾಹ ನೀಡುವ ಸಲುವಾಗಿ ಬ್ರೆಜಿಲ್ ಗೆ ಬಂದಿದ್ದೇವೆ. ಪದಕ ಗೆಲ್ಲಲು ಭಾರತೀಯ ಆಟಗಾರರು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತೀಯ ಅಥ್ಲೀಟ್ ಗಳಿಗೆ ನಮ್ಮ ಸರ್ಕಾರ ರು. 6 ಕೋಟಿಯನ್ನು ಬಹುಮಾನವಾಗಿ ನೀಡುತ್ತದೆ ಎಂದು ಹೇಳಿದ್ದಾರೆ.
Advertisement