ಬ್ಯಾಡ್ಮಿಂಟನ್ ನಲ್ಲಿ ಕ್ವಾರ್ಟರ್ ಫೈನಲ್ ಗೇರಿದ ಪಿವಿ ಸಿಂಧು, ಶ್ರೀಕಾಂತ್; ಭಾರತದ ಪದಕದಾಸೆ ಜೀವಂತ

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದಾಸೆ ಇನ್ನೂ ಜಿವಂತವಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತ ಪಿವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್ ಗೇರಿದ್ದಾರೆ.
ಕಿಡಾಂಬಿ ಶ್ರೀಕಾಂತ್ ಹಾಗೂ ಪಿವಿ ಸಿಂಧು
ಕಿಡಾಂಬಿ ಶ್ರೀಕಾಂತ್ ಹಾಗೂ ಪಿವಿ ಸಿಂಧು

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದಾಸೆ ಇನ್ನೂ ಜಿವಂತವಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತ ಪಿವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಅವರು ಕ್ವಾರ್ಟರ್  ಫೈನಲ್ ಗೇರಿದ್ದಾರೆ.

ರಿಯೋ ಡಿ ಜನೈರೋದಲ್ಲಿ ನಡೆದ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿವಿ ಸಿಂಧು ತೈಪೆ ದೇಶದ ಟಾಯ್ ಟ್ಜು ಯಿಂಗ್ ಅವರನ್ನು 21-13, 21-15 ನೇರ ಸೆಟ್ ಗಳ ಮೂಲಕ  ಮಣಿಸಿದರು. ಒಟ್ಟು 16 ಸುತ್ತುಗಳ ಸುದೀರ್ಘವಾಗಿ ನಡೆದ ಈ ಪಂದ್ಯದಲ್ಲಿ ಭಾರತದ ಸಿಂಧುಗೆ ಟಾಯ್ ಟ್ಜು ಯಿಂಗ್ ಅವರು ತೀವ್ರ ಪೈಪೋಟಿ ನೀಡಿದರು. ಆದರೂ ತಮ್ಮ ಆಕ್ರಮಣಕಾರಿ ಆಟ  ಮುಂದುವರೆಸಿದ ಪಿವಿ ಸಿಂಧು ಟಾಯ್ ಟ್ಜು ಯಿಂಗ್ ಅವರನ್ನು 21-13, 21-15 ಅಂಕಗಳ ಅಂತರದಿಂದ ಮಣಿಸಿದರು. ಆ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಇನ್ನು ಪುರುಷರ ವಿಭಾಗದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಅವರು, ಡ್ಯಾನಿಷ್ ಮೂಲದ ಜಾನ್ ಜೋರ್ಗನ್ ಅವರನ್ನು 21-19, 21-19 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಒಟ್ಟು 16  ಸುತ್ತುಗಳಲ್ಲಿ ಈ ನಡೆದ ಈ ಪಂದ್ಯದಲ್ಲಿ ಡ್ಯಾನಿಷ್ ಮೂಲದ ಜಾನ್ ಜೋರ್ಗನ್ ಕಿಡಾಂಬಿ ಶ್ರೀಕಾಂತ್ ಗೆ ಸುಲಭದ ತುತ್ತೇನೂ ಆಗಿರಲಿಲ್ಲ. ತಮ್ಮ ಪ್ರಬಲ ರಿವರ್ಸ್ ಗಳ ಮೂಲಕ ಶ್ರೀಕಾಂತ್  ಅವರನ್ನು ಕೆಣಕುವಲ್ಲಿ ಜಾನ್ ಜೋರ್ಗನ್ ಯಶಸ್ವಿಯಾಗಿದ್ದರು. ಹೀಗಾಗಿ ಶ್ರೀಕಾಂತ್ ಅವರು ಕಡಿಮೆ ಅಂಕಗಳ ಅಂತರದಲ್ಲಿ ಜಯ ದಾಖಲಿಸುವಂತಾಯಿತು.

ಸ್ಟೀಪಲ್ ಚೇಸ್ ನಲ್ಲಿ ಲಲಿತಾ ಬಾಬರ್ ಹಾಗೂ ಜಿಮ್ನಾಸ್ಟಿಕ್ ನಲ್ಲಿ ದೀಪಾ ಕರ್ಮಾಕರ್ ಫೈನಲ್ ಗೇರಿ ಭಾರತಕ್ಕೆ ಪದಕದಾಸೆ ಮೂಡಿಸಿದ್ದರಾದರೂ ಫೈನಲ್ ಕ್ರಮವಾಗಿ 10 ಮತ್ತು ನಾಲ್ಕನೇ  ಸ್ಥಾನ ಪಡೆಯುವ ಮೂಲಕ ನಿರಾಸೆ ಮೂಡಿಸಿದ್ದರು. ಇದೀಗ ಭಾರತೀಯ ಪಾಳಯದಲ್ಲಿ ಮತ್ತೆ ಪದಕದಾಸೆ ಮೂಡಿದ್ದು, ಪಿವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್  ಗೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com