
ಪೋರ್ಟ್ ಆಫ್ ಸ್ಪೇನ್: ರಿಯೋ ಒಲಿಂಪಿಕ್ಸ್ ನ ಮಹಿಳೆಯರ ಸಿಂಗಲ್ಸ ಬ್ಯಾಡ್ಮಿಂಟನ್ ನ ಫೈನಲ್ ಪ್ರವೇಶಿಸಿರುವ ಪಿವಿ ಸಿಂಧುಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಚಿನ್ನದ ಪದಕ ತರುವಂತೆ ವೆಸ್ಟ್ ಇಂಡೀಸ್ ನಿಂದ ಸೆಲ್ಫೀ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ಖಚಿತಪಡಿಸಿರುವುದಕ್ಕೆ ನಿಮಗೆ ಅಭಿನಂದನೆ. ನೀವು ದೇಶಕ್ಕೆ ಹೆಮ್ಮೆ ತಂದಿದ್ದೀರ. ಇದೇ ರೀತಿ ಅಂತಿಮ ಪಂದ್ಯ ಮಹಾಕದನವಾಗಲಿದೆ. ಇದಕ್ಕಾಗಿ ನಾನು ನಿಮಗೆ ವೆಸ್ಟ್ ಇಂಡೀಸ್ ನಿಂದ ಶುಭ ಹಾರೈಸುತ್ತೇನೆ. ನೀವು ದೇಶಕ್ಕೆ ಚಿನ್ನದ ಪದಕ ತರುತ್ತೀರಿ ಅಂದುಕೊಂಡಿದ್ದೇನೆ. ಗುಡ್ ಲಕ್ ಎಂದು ವಿಡಿಯೋ ಮಾಡಿ ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಸ್ಪೇನ್ ಆಟಗಾರ್ತಿ ಕ್ಯಾರೊಲಿನಾ ಮರಿನ್ ವಿರುದ್ಧ ಪಿವಿ ಸಿಂಧು ಅವರು ಚಿನ್ನದ ಪದಕಕ್ಕಾಗಿ ಸೆಣೆಸಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ರ ಸುಮಾರಿಗೆ ಪಂದ್ಯ ಆರಂಭಗೊಳ್ಳಲಿದೆ.
Advertisement