ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬಳಿಗೆ ಹೋಗುವೆ: ರೆಸ್ಲರ್ ನರಸಿಂಗ್ ಯಾದವ್

ಡೋಪಿಂಗ್ ಟೆಸ್ಟ್ ವಿಫಲ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿಯಿಂದ ನಾಲ್ಕು ವರ್ಷ ನಿಷೇಧಕ್ಕೊಳಗಾಗಿರುವ ಭಾರತದ ಕುಸ್ತಿಪಟು ನರಸಿಂಗ್ ಯಾದವ್, ತಮಗೆ ಅನ್ಯಾಯವಾಗಿದೆ. ತಮ್ಮ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಕೊಂಡೊಯ್ದು ನ್ಯಾಯ ಕೇಳುವುದಾಗಿ ಹೇಳಿದ್ದಾರೆ.
ನರಸಿಂಗ್ ಯಾದವ್ (ಸಂಗ್ರಹ ಚಿತ್ರ)
ನರಸಿಂಗ್ ಯಾದವ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಡೋಪಿಂಗ್ ಟೆಸ್ಟ್ ವಿಫಲ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿಯಿಂದ ನಾಲ್ಕು ವರ್ಷ ನಿಷೇಧಕ್ಕೊಳಗಾಗಿರುವ ಭಾರತದ ಕುಸ್ತಿಪಟು ನರಸಿಂಗ್ ಯಾದವ್, ತಮಗೆ  ಅನ್ಯಾಯವಾಗಿದೆ. ತಮ್ಮ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಕೊಂಡೊಯ್ದು ನ್ಯಾಯ ಕೇಳುವುದಾಗಿ ಹೇಳಿದ್ದಾರೆ.

ನಿನ್ನೆ ರಿಯೊ ಡಿ ಜನೈರೋದಲ್ಲಿ ನಡೆದ ನಾಟಕೀಯ ಬೆಳವಣೆಗೆಯಲ್ಲಿ ಡೋಪಿಂಗ್ ಟೆಸ್ಟ್ ಸಂಬಂಧ ವಾಡಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ, ಸಿಎಎಸ್ ನರಸಿಂಗ್ ಯಾದವ್ ಅವರನ್ನು  ದೋಷಿ ಎಂದು ತೀರ್ಪು ನೀಡಿ ಅವರಿಗೆ ನಾಲ್ಕು ವರ್ಷಗಳ ನಿಷೇಧ ಹೇರಿತ್ತು. ಈ ಹಿನ್ನಲೆಯಲ್ಲಿ ನರಸಿಂಗ್ ಯಾದವ್ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆಯನ್ನೇ ಕಳೆದುಕೊಂಡು  ಕ್ರೀಡಾಗ್ರಾಮದಿಂದ ಹೊರಬಿದ್ದಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನರಸಿಂಗ್ ಯಾದವ್, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಬೇಕು ಎಂಬ ತಮ್ಮ ಆಸೆ ಭಗ್ನವಾಗಿದೆ. ಕಳೆದ ಎರಡು ತಿ೦ಗಳಿನಿ೦ದ ನಡೆಯುತ್ತಿದ್ದ  ಪಿತೂರಿಗೆ ಕಡೆಗೂ ಜಯ ಸಿಕ್ಕಿದೆ. ದೇಶಕ್ಕೆ ಪದಕ ಜಯಿಸುವ ನನ್ನ ಕನಸು ಈಡೇರಲಿಲ್ಲ. ಸ್ಪಧೆ೯ಗೆ ಕೇವಲ 12 ಗ೦ಟೆಗೆ ಮೊದಲು ಹೊರಬಿದ್ದಿದ್ದು ತು೦ಬಾ ಬೇಸರವಾಯಿತು. ನಾನು ನಿದೋ೯ಷಿ  ಎ೦ದು ನಿರೂಪಿಸಲು ಯಾವುದೇ ಕೆಲಸಕ್ಕಾದರೂ ಸಿದ್ಧನಿದ್ದೇನೆ. ನ್ಯಾಯಕ್ಕಾಗಿ ನಿರ೦ತರ ಹೋರಾಟ ನಡೆಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ನನ್ನ ಪ್ರಕರಣ ಒಯ್ದು  ನ್ಯಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ. "ನನ್ನ ಹೆಸರಿಗೆ ಕಪ್ಪುಮಸಿ ಬಳಿಯಲಾಗಿದ್ದು, ಈ ಪ್ರಕರಣದಿಂದ ಕೇವಲ ನನ್ನ ಹೆಸರಿಗೆ ಮಾತ್ರವಲ್ಲ ಬದಲಿಗೆ ದೇಶದ ಖ್ಯಾತಿಗೂ ಧಕ್ಕೆ ತರಲಾಗಿದೆ.  ನನ್ನಿಂದ ತಪ್ಪಾಗಿದ್ದರೆ ನನನ್ನು ಗಲ್ಲಿಗೇರಿಸಿ. ಆದರೆ ಈ ಪ್ರಕರಣವನ್ನು ನಾನು ಇಲ್ಲಿಗೇ ಬಿಡುವುದಿಲ್ಲ. ಉನ್ನತ ಮಟ್ಟದ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ನ್ಯಾಯ ಕೇಳುತ್ತೇನೆ ಎಂದು  ಹೇಳಿದ್ದಾರೆ.

ಈ ಹಿಂದೆ ಡೋಪಿಂಗ್ ಟೆಸ್ಟ್ ನಲ್ಲಿ ವಿಫಲರಾಗಿದ್ದ ವೇಳೆ ತಮ್ಮ ಆಹಾರದಲ್ಲಿ ಉದ್ದೇಶ ಪೂರ್ವಕವಾಗಿ ಉದ್ದೀಪನ ಮದ್ದು ಸೇರಿಸಲಾಗಿದೆ ಎಂದು ನರಸಿಂಗ್ ಯಾದವ್ ಆರೋಪಿಸಿದ್ದರು. ಘಚನೆ  ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ಒಲಿಂಪಿಕ್ಸ್ ನಲ್ಲಿ ನಾನು ಪಾಲ್ಗೊಳ್ಳ ಬಾರದು ಎಂದು ಯಾರೋ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ್ದ  ನ್ಯಾಯಾಲಯ ಮತ್ತು ನಾಡಾ ನರಸಿಂಗ್ ಯಾದವ್ ಕ್ಲೀನ್ ಚಿಟ್ ನೀಡಿತ್ತು. ಆದರೆ ನಾಡಾ ಕ್ರಮವನ್ನು ಪ್ರಶ್ನಿಸಿದ್ದ ವಾಡಾ ಸಿಎಎಸ್ ನಲ್ಲಿ ಅರ್ಜಿ ಸಲ್ಲಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com