ಮುಂಬೈ ಆಸ್ಪತ್ರೆಯಲ್ಲಿ ಸೈನಾ ನೆಹ್ವಾಲ್ ಗೆ ಬಲ ಮಂಡಿ ಶಸ್ತ್ರ ಚಿಕಿತ್ಸೆ

ಮಾಜಿ ವಿಶ್ವ ನಂಬರ್ 1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಶನಿವಾರ ಬೆಳಗ್ಗೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್
ಮುಂಬೈ: ಮಾಜಿ ವಿಶ್ವ ನಂಬರ್ 1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಶನಿವಾರ ಬೆಳಗ್ಗೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 
"ಶಸ್ತ್ರಚಿಕಿತ್ಸೆ ನಂತರ" ಎಂದು 26 ವರ್ಷದ ಸೈನಾ ನಗುವಿನೊಂದಿಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಹಿಂದೆ ಮಾಡಿದ್ದ ಟ್ವೀಟ್ ನಲ್ಲಿ ತಾನು ಭಯಗೊಂಡಿದ್ದು, ಹಿಂದಿನ ರಾತ್ರಿ ನಿದ್ದೆಯೇ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. 
ಅವರ ಅಭಿಮಾನಿಗಳಿಗಾಗಿ, ಬ್ಯಾಂಡೇಜ್ ನಿಂದ ಸುತ್ತಿದ ಬಲಗಾಲಿನ ಫೋಟೋ ಕೂಡ ಸೈನಾ ಟ್ವೀಟ್ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆಯ ನಂತರ ನಾಲ್ಕು ತಿಂಗಳ ಕಾಲ ಸೈನಾ ಬ್ಯಾಡ್ಮಿಂಟನ್ ಅಂಗಳದಿಂದ ದೂರ ಉಳಿಯಬೇಕಾಗುತ್ತದೆ.
ದಿನಷಾ ಪಾರ್ದಿವಾಲಾ ಮುಖಂಡತ್ವದ ವೈದ್ಯರ ತಂಡ ಈ ಶತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದೆ. 
ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ "ನೀವು ಶೀಘ್ರ ಗುಣಮುಖರಾಗಲು ಪ್ರತಿ ಭಾರತೀಯ ಪ್ರಾರ್ಥಿಸಲಿದ್ದಾರೆ" ಎಂದು ಟ್ವೀಟ್ ಮಾಡಿ ಸೈನಾರಿಗೆ ಧೈರ್ಯ ತುಂಬಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com