"ಐ ಆ್ಯಮ್ ದಿ ಗ್ರೇಟೆಸ್ಟ್": ಉಸೇನ್ ಬೋಲ್ಟ್ ಮೊದಲ ನುಡಿ

400 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ಓಟದಲ್ಲಿ ತಾವೇ ಶ್ರೇಷ್ಠ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಉಸೇನ್ ಬೋಲ್ಟ್
ಉಸೇನ್ ಬೋಲ್ಟ್

ರಿಯೋ ಡಿ ಜನೈರೋ: 100, 200 ಮತ್ತು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ನಿಜಕ್ಕೂ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಕ್ಯಾಮೆರಾ ಮುಂದೆ ಆಗಮಿಸಿದ ಬೋಲ್ಟ್ ಓಟದಲ್ಲಿ ತಾವೇ ಶ್ರೇಷ್ಠ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾವೊಬ್ಬ ಶ್ರೇಷ್ಠ ಓಟಗಾರ ಎಂಬುದು ಈ ಗೆಲುವಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ನನ್ನ ಪ್ರದರ್ಶನದಿಂದ ನಾನು ನಿಜಕ್ಕೂ ಸಂತೋಷವಾಗಿದ್ದೇನೆ. ಒತ್ತಡದ ನಡುವೆಯೂ ನಾನು ಶ್ರೇಷ್ಠ ಪ್ರದರ್ಶನ ನೀಡಿದ್ದೇನೆ. ನನ್ನ ಒತ್ತಡ ಇದೀಗ ಕಡಿಮೆಯಾಗಿದ್ದು, ಇಂದು ರಾತ್ರಿ ದೊಡ್ಡ ಸಂತೋಷಕೂಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಬೋಲ್ಟ್ ಹೇಳಿದರು.

ಬೋಲ್ಟ್ ಗೆಲುವಿನ ಗುರಿ ತಲುಪುತ್ತಿದ್ದಂತೆಯೇ ಜಮೈಕಾದ ಇತರೆ ಆಟಗಾರರು ಕ್ರೀಡಾಂಗಣದಲ್ಲೇ ಸಾಂಬಾ ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದರು. ಒಂದೆಡೆ ಜಮೈಕಾ ಮತ್ತು ಉಸೇನ್ ಬೋಲ್ಟ್ ಅಭಿಮಾನಿಗಳ ಚಪ್ಪಾಳೆ ಮತ್ತು ಶಿಳ್ಳೆಗಳು ಮತ್ತೊಂದೆಡೆ ಬೋಲ್ಟ್ ಸೇರಿದಂತೆ ಅವರ ಸಹ ಆಟಗಾರರ ಸಾಂಬಾ ನೃತ್ಯದಿಂದ ಇಡೀ ಕ್ರೀಡಾಂಗಣವೇ ಕೆಲ ಹೊತ್ತು ಸಂಭ್ರಮದಲ್ಲಿ ಮುಳುಗಿತ್ತು.

ಈ ವೇಳೆ ಮಾತನಾಡಿದ ಜಮೈಕಾದ ಮತ್ತೋರ್ವ ಆಟಗಾರ ಯೊಹಾನ್ ಬ್ಲೇಕ್, ಬೋಲ್ಟ್ ಅಮರ, ಅವರ ಸಾಧನೆ ಇಡೀ ದೇಶಕ್ಕೇ ಸ್ಪೂರ್ತಿದಾಯಕವಾದದ್ದು ಎಂದು ಹೇಳಿದ್ದಾರೆ. ಇನ್ನು 2016ರ ಒಲಿಂಪಿಕ್ಸ್ ಬಳಿಕ ಬೋಲ್ಚ್ ವಿದಾಯ ಹೇಳುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬ್ಲೇಕ್ ಅವರ ಸೇವೆ ದೇಶಕ್ಕೆ ಇನ್ನೂ ಅಗತ್ಯವಿದ್ದು, 2020ರ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com