ನಾನೇಕೆ ಸುಳ್ಳು ಹೇಳಲಿ? ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು: ಒ ಪಿ ಜೈಶಾ

ರಿಯೊ ಒಲಿಂಪಿಕ್ ಮ್ಯಾರಥಾನ್ ನಲ್ಲಿ ಓಡಿದ ಕೇರಳ ಮೂಲದ ಒ.ಪಿ.ಜೈಶಾ ಶಕ್ತಿವರ್ಧಕ ಪಾನೀಯಗಳನ್ನು ಕುಡಿಯಲು ...
ಒ.ಪಿ.ಜೈಶಾ
ಒ.ಪಿ.ಜೈಶಾ
ಬೆಂಗಳೂರು: ರಿಯೊ ಒಲಿಂಪಿಕ್ ಮ್ಯಾರಥಾನ್ ನಲ್ಲಿ ಓಡಿದ ಕೇರಳ ಮೂಲದ ಒ.ಪಿ.ಜೈಶಾ ಶಕ್ತಿವರ್ಧಕ ಪಾನೀಯಗಳನ್ನು ಕುಡಿಯಲು ನಿರಾಕರಿಸಿದ್ದರು ಎಂಬ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಆರೋಪದ ಬಗ್ಗೆ ತನಿಖೆಯಾಗಬೇಕೆಂದು ಅಥ್ಲೆಟ್ ಒಪಿ ಜೈಶಾ ಒತ್ತಾಯಿಸಿದ್ದಾರೆ.
33 ವರ್ಷದ ಜೈಶಾ ಮೊನ್ನೆ ರಿಯೊ ಒಲಿಂಪಿಕ್ ನಲ್ಲಿ 42 ಕಿಲೋ ಮೀಟರ್ ಉದ್ದದ ಮ್ಯಾರಥಾನ್ ನಲ್ಲಿ ಓಡುವಾಗ ಅಂತಿಮ ಸುತ್ತಿನಲ್ಲಿ ಕುಡಿಯಲು ನೀರು ಮತ್ತು ಇತರ ಶಕ್ತಿವರ್ಧಕ ಪಾನೀಯ ಸಿಗದೆ ಬಾಯಾರಿಕೆಗೊಂಡು ಕುಸಿದುಬಿದ್ದಿದ್ದಳು. 
ಅಥ್ಲೀಟ್ ಗಳಿಗೆ ಪ್ರತಿ 2.5 ಕಿ.ಮೀ ಮ್ಯಾರಥಾನ್ ಮುಗಿದ ಬಳಿಕ ರಿಫ್ರೆಶ್ ಮೆಂಟ್ ಪಾಯಿಂಟ್ ಬಳಿ ಇತರೆ ದೇಶಗಳ ಕ್ರೀಡಾಪಟುಗಳ ಜತೆ ಆಯಾ ದೇಶಗಳ ಅಧಿಕಾರಿಗಳು ಇದು ದುಬಾರಿ ಗ್ಲುಕೋಸ್, ಜೇನುತುಪ್ಪ, ಶಕ್ತಿವರ್ಧಕ ಹಾಗೂ ಪಾನಿಯಾ ನೀಡುತ್ತಾರೆ. ಆದರೆ ನನಗೆ ಕನಿಷ್ಠ ನೀರು ನೀಡುವವರೂ ಇರಲಿಲ್ಲ. ಇಂಥ ನಿರಾಸಕ್ತ ಭಾರತದ ಅಧಿಕಾರಿಗಳಿಗೆ ಕೃತಜ್ಞತೆ ಎಂದು ಜೈಶಾ ತಮ್ಮ ಅಳಲು ತೋಡಿಕೊಂಡಿದ್ದರು. 
ಇದಕ್ಕೆ ಭಾರತ ಅಥ್ಲೀಟ್ ಫೆಡರೇಶನ್ ನ ಮುಖ್ಯಸ್ಥ  ಸಿಕೆ ವಲ್ಸನ್ ಪ್ರತಿಕ್ರಿಯೆ ನೀಡಿ, ಅಧಿಕಾರಿಗಳು ಅಲ್ಲಿರಲಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಭಾರತೀಯ ಅಧಿಕಾರಿಗಳು ಇದ್ದ ರಿಫ್ರೆಶ್ ಮೆಂಟ್ ಕೌಂಟರ್ ನಲ್ಲಿ ಪಾನೀಯಗಳನ್ನು ತೆಗೆದುಕೊಳ್ಳಲು ಜೈಶಾ ಮತ್ತವರ ಕೋಚ್ ನಿರಾಕರಿಸಿದ್ದರು. ಆದರೂ ಕೂಡ ಯಾವುದಾದರೂ ರೀತಿಯಲ್ಲಿ ಅಥ್ಲೀಟ್ ಸೇವೆಗೆ ಕುಂದುಕೊರತೆಯುಂಟಾಗಿದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜೈಶಾ, ನನ್ನ ಇಲ್ಲಿಯವರೆಗಿನ ಕ್ರೀಡಾ ಜೀವನದಲ್ಲಿ ಒಂದು ಬಾರಿ ಕೂಡ ದೂರು, ಆಪಾದನೆ ಮಾಡದಿರುವಾಗ ಈಗ ಈ ವಿಷಯಕ್ಕೆ ನಾನೇಕೆ ಸುಳ್ಳು ಹೇಳಲಿ? ನನಗೆ ಸರ್ಕಾರ ಅಥವಾ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಆದರೆ ದೇವರು ಮತ್ತು ನನಗೆ ಸತ್ಯ ಏನೆಂಬುದು ಗೊತ್ತು, ಅದನ್ನು ನಾನು ಕ್ರೀಡೆಗೆ ಬಿಟ್ಟುಬಿಡುತ್ತೇನೆ, ಆದರೂ ಈ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಎಂದು ಜೈಶಾ ಒತ್ತಾಯಿಸಿದರು. ಅವರು ಎಎನ್ಐ ಸುದ್ದಿಸಂಸ್ಥೆಗೆ ಇಂದು ಪ್ರತಿಕ್ರಿಯೆ ನೀಡಿದರು.   
ರಿಯೊ ಮ್ಯಾರಥಾನ್ ಮಹಿಳೆಯರ ಸ್ಪರ್ಧೆಯಲ್ಲಿ ಜೈಶಾ 89ನೆಯವರಾಗಿ ಸ್ಪರ್ಧೆ ಮುಗಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com