ಬೆಳ್ಳಿತಾರೆ ಸಿಂಧು ಜತೆ ಜಾಹೀರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್

ರಿಯೊ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಪಿವಿ ಸಿಂಧು ಅದೃಷ್ಟವೇ ಬದಲಾಗಿದ್ದು, ಪ್ರತಿಷ್ಠಿತ ಕಂಪನಿಗಳು ಸಿಂಧು ಜತೆ ಜಾಹೀರಾತು ಒಪ್ಪಂದಕ್ಕೆ ಮುಗಿಬೀಳುತ್ತಿವೆ...
ಪಿವಿ ಸಿಂಧು
ಪಿವಿ ಸಿಂಧು

ಹೈದರಾಬಾದ್: ರಿಯೊ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಪಿವಿ ಸಿಂಧು ಅದೃಷ್ಟವೇ ಬದಲಾಗಿದ್ದು, ಪ್ರತಿಷ್ಠಿತ ಕಂಪನಿಗಳು ಸಿಂಧು ಜತೆ ಜಾಹೀರಾತು ಒಪ್ಪಂದಕ್ಕೆ ಮುಗಿಬೀಳುತ್ತಿವೆ.

ಪ್ರಸ್ತುತ ಸಿಂಧು ಉತ್ಪನ್ನ ಮೌಲ್ಯ ಹಿಂದೆಂದಿಗಿಂತಲೂ ದುಪ್ಪಟ್ಟು ವೇಗದಲ್ಲಿ ಹೆಚ್ಚಳ ಕಂಡಿದ್ದು, ಕೆಲ ವಾಣಿಜ್ಯ ಕಂಪನಿಗಳ ಜತೆ ಸಿಂಧು ಒಡಂಬಡಿಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಸಿಂಧು ಒಲಿಂಪಿಕ್ಸ್ ಗೆ ಮೊದಲು ಇದ್ದ ಮಾರುಕಟ್ಟೆ ಮೌಲ್ಯ 2 ಕೋಟಿ ರುಪಾಯಿ ಇತ್ತು. ಇದೀಗ ಸರ್ಕಾರ ನೀಡಿರುವ ಕೋಟ್ಯಂತರ ನಗದು ಬಹುಮಾನ ಸೇರಿದಂತೆ ಎಲ್ಲ ಮೌಲ್ಯಗಳು ಸೇರಿ ಸಿಂಧು ಮಾರುಕಟ್ಟೆ ಮೌಲ್ಯ ಗಗನಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com