ಮುಂದಿನ 3 ಒಲಿಂಪಿಕ್ಸ್ ಸಿದ್ಧತೆಗೆ ಟಾಸ್ಕ್ ಫೋರ್ಸ್: ಪ್ರಧಾನಿ ಮೋದಿ

ರಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆಯ ಹೊರತಾಗಿಯೂ ನಿರ್ಣಾಯಕ ಪಂದ್ಯಗಳಲ್ಲಿ ನಿರಾಸೆ ಮೂಡಿಸಿ ಹೆಚ್ಚು ಪದಕಗಳಿಸುವಲ್ಲಿ ವಿಫಲವಾದ ಭಾರತದ ಆಥ್ಲೀಟ್ ಗಳನ್ನು ಪ್ರೋತ್ಸಾಹಿಸಲು ಮತ್ತು ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಲು ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆಯ ಹೊರತಾಗಿಯೂ ನಿರ್ಣಾಯಕ ಪಂದ್ಯಗಳಲ್ಲಿ ನಿರಾಸೆ ಮೂಡಿಸಿ ಹೆಚ್ಚು ಪದಕಗಳಿಸುವಲ್ಲಿ ವಿಫಲವಾದ ಭಾರತದ ಆಥ್ಲೀಟ್ ಗಳನ್ನು  ಪ್ರೋತ್ಸಾಹಿಸಲು ಮತ್ತು ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಲು ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಅನುಭವಿಸಿದ ನಿರಾಸೆ ಮುಂದಿನ ಕ್ರೀಡಾಕೂಟಗಳಲ್ಲಿ ಆಗಬಾರದು ಎಂದು ಮುಂದಿನ ಮೂರು ಒಲಿಂಪಿಕ್ಸ್ ಕ್ರೀಡಾಕೂಟಗಳಿಗಾಗಿ  ಕಾರ್ಯತಂತ್ರ ಹೆಣೆಯಲು ಟಾಸ್ಕ್ ಫೋರ್ಸ್ ರಚನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ  ನಿರ್ಣಯ ಕೈಗೊಳ್ಳಲಾಗಿದ್ದು, ಟಾಸ್ಕ್ ಫೋರ್ಸ್ ನ ಸಹಾಯದ ಮೂಲಕ ಭಾರತದ ಅಥ್ಲೀಟ್ ಗಳನ್ನು ಮುಂದಿನ ಒಲಿಂಪಿಕ್ಸ್ ಗೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಒಲಿಂಪಿಕ್ಸ್ ಗೆ ಉತ್ತಮ ಮತ್ತು ಅರ್ಹ ಅಥ್ಲೀಟ್ ಗಳನ್ನು ಆಯ್ಕೆ ಮಾಡುವುದು, ಆಯ್ಕೆಯಾದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಮೂಲಕ ಕ್ರೀಡಾಕೂಟಕ್ಕೆ ಅಣಿಗೊಳಿಸುವುದು ಈ ಟಾಸ್ಕ್  ಫೋರ್ಸ್ ಪ್ರಮುಖ ಉದ್ದೇಶವಾಗಿದೆ. ಇದಲ್ಲದೆ ಕ್ರೀಡಾಪಟುಗಳ ಮೂಲಭೂತ ಸೌಕರ್ಯ ಒದಗಿಸುವುದೂ ಕೂಡ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ರಿಯೋ ಒಲಿಂಪಿಕ್ಸ್ ಗೂ ಇತ್ತು ಟಿಒಪಿ ಪ್ರೋತ್ಸಾಹ
ಬ್ರೆಜಿಲ್ ನಲ್ಲಿ ನಡೆದ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅಥ್ಲೀಟ್ ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಟಿಒಪಿ ಯೋಜನೆಯಡಿಯಲ್ಲಿ 120 ಕೋಟಿ ರು.  ಅನುದಾನ ನೀಡಿತ್ತು. ಈ ಹಿನ್ನಲೆಯಲ್ಲಿ ಭಾರತ ಅಥ್ಲೀಟ್ ತಂಡ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ವಿಶ್ವದ ಗಮನೆ ಸೆಳೆಯಿತಾದರೂ ಪದಕಗಳಿಸುವಲ್ಲಿ  ವಿಫಲವಾಗಿತ್ತು.

ಈ ಹಿನ್ನಲೆಯಲ್ಲಿ ಮತ್ತಷ್ಟು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ 2020, 2024 ಮತ್ತು 2028ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗುರಿಯಾಗಿರಿಸಿಕೊಂಡು ಕಾರ್ಯತಂತ್ರ ರಚನೆಗೆ ಟಾಸ್ಕ್  ಫೋರ್ಸ್ ರಚನೆ ಮಾಡಿದೆ. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕ್ರೀಡಾಪಟುಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com