ಲೋಧಾ ಸಮಿತಿ ಶಿಫಾರಸು ಅನುಷ್ಠಾನಗೊಂಡರೆ ಬಿಸಿಸಿಐಗೆ 1600 ಕೋಟಿ ರು. ನಷ್ಟ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸುಧಾರಣೆಗೆಂದು ನಿವೃತ್ತ ನ್ಯಾಯಮೂರ್ತಿ ಆರ್.ಎಂ ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ಮಹತ್ವದ...
ಬಿಸಿಸಿಐ
ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸುಧಾರಣೆಗೆಂದು ನಿವೃತ್ತ ನ್ಯಾಯಮೂರ್ತಿ ಆರ್.ಎಂ ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ಮಹತ್ವದ ಶಿಫಾರಸುಗಳು ಯಥಾವತ್ ಆಗಿ ಅನುಷ್ಠಾನಕ್ಕೆ ತಂದದ್ದೇ ಆದಲ್ಲಿ ಬಿಸಿಸಿಐ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.

ಆರನೇ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದಿಂದಾಗಿ ಸುಪ್ರೀಂಕೋರ್ಟ್ ಆಣತಿಯಂತೆ ಆರ್.ಎಂ ಲೋಧಾ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದರೆ ಬಿಸಿಸಿಐ 1600 ಕೋಟಿ ರು.ಗಳ ಭಾರಿ ನಷ್ಟ ಅನುಭವಿಸಬೇಕಿದೆ.

ಬಿಸಿಸಿಐನ ಬ್ಯಾಲೆನ್ಸ್ ಶೀಟ್(ಆಯವ್ಯಯ ಪತ್ರ)ನ ಪ್ರಕಾರ ಕೇವಲ ಬಿಸಿಸಿಐನ ಕಾರ್ಯಚರಣೆಯ ಅಂದಾಜು ಮೊತ್ತ 2000 ಕೋಟಿ ರು. ಎನ್ನಲಾಗಿದ್ದು, ಈ ಪೈಕಿ ಅತಿಹೆಚ್ಚಿನ ಆದಾಯ ಪಂದ್ಯದ ನೇರಪ್ರಸಾರ ಹಾಗೂ ಜಾಹೀರಾತು ಮೂಲಗಳಿಂದಲೇ ಹರಿದುಬರುತ್ತಿದೆ. ಆದರೆ ಲೋಧ ಸಮಿತಿ ಪಂದ್ಯದ ಭೋಜನ, ಚಹಾ ಇಲ್ಲವೇ ಡ್ರಿಂಕ್ಸ್ ವಿರಾಮದ ವೇಳೆಯಲ್ಲಷ್ಟೇ ಜಾಹೀರಾತು ಪ್ರಸಾರಕ್ಕೆ ಅನುಮತಿ ನೀಡಿದ್ದು ಇದು ಕಾರ್ಯಗತಗೊಂಡರೆ ಬಿಸಿಸಿಐನ ಆದಾಯ 400 ಕೋಟಿ ರು.ಗೆ ತಗ್ಗಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com