
ವೆಲ್ಲಿಂಗ್ಟನ್: ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ ಅವರ 12 ವರ್ಷದ ಟೆಸ್ಟ್ ಸಾಧನೆಯನ್ನು ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಆ್ಯಡಂ ವೋಗ್ಸ್ ದಾಖಲೆ ನಿರ್ಮಿಸಿದ್ದಾರೆ.
ಸತತವಾಗಿ ಆಡಿದ ಪಂದ್ಯಗಳಲ್ಲಿ ಔಟಾಗದೇ ಉಳಿದು 500 ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ವೋಗ್ಸ್ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್ 497 ರನ್ ಗಳಿಸಿದ್ದು ದಾಖಲೆಯಾಗಿತ್ತು.
ಡಿಸೆಂಬರ್‌ನಲ್ಲಿ ನಡೆದ ವೆಸ್ಟ್ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಔಟಾಗದೇ 269 ರನ್ ಗಳಿಸಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ನಲ್ಲಿ ಔಟಗಾದೇ 176 ರನ್ ಗಳಿಸಿ ವೋಗ್ಸ್ ಈ ದಾಖಲೆ ನಿರ್ಮಿಸಿದ್ದಾರೆ. ವೋಗ್ಸ್ 123 ರನ್ ಮುಟ್ಟುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದರು.
12 ವರ್ಷಗಳ ಹಿಂದೆ ಸಚಿನ್ 2004 ರ ಜನವರಿ ಮತ್ತು ಮಾರ್ಚ್ ತಿಂಗಳ ಮಧ್ಯದಲ್ಲಿ ನಡೆದ ಪಂದ್ಯಗಳಲ್ಲಿ ಔಟಾಗದೇ 241, ಔಟಾಗದೇ 60, ಔಟಾಗದೇ 194 ಮತ್ತು ಔಟಾಗದೇ 2 ರನ್ ಗಳಿಸಿ ದಾಖಲೆ ಬರೆದಿದ್ದರು.
ಇದಕ್ಕೂ ಮುಂಚೆ ಈ ದಾಖಲೆ ವೆಸ್ಟ್ ವಿಂಡೀಸ್‌ನ ಆಟಗಾರ ಗ್ಯಾರಿ ಸೋಬರ್ಸ್ (365) ಹೆಸರಿನಲ್ಲಿತ್ತು. ಇದರ ಜೊತೆಗೆ ವೋಗ್ಸ್ 14 ಟೆಸ್ಟ್‌ಗಳನ್ನು ಆಡುವ ಮೂಲಕ ತಮ್ಮ ಬ್ಯಾಟಿಂಗ್ ಸರಾಸರಿಯನ್ನು 100 ರಷ್ಟು ಮಾಡಿಕೊಂಡು ಆಸ್ಟ್ರೇಲಿಯಾದವರೇ ಆದ ಡಾನ್ ಬ್ರಾಡ್ಮನ್ ಅವರ ದಾಖಲೆ ಮುರಿದು ವೋಗ್ಸ್ ಹೊಸ ಇತಿಹಾಸ ಬರೆದಿದ್ದಾರೆ.
Advertisement