ತೆರಿಗೆ-ವಂಚನೆ: ಖ್ಯಾತ ಫುಟ್ ಬಾಲ್ ಆಟಗಾರ ನೇಮರ್ ಆಸ್ತಿ ಜಪ್ತಿ

ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇರೆಗೆ ಬ್ರೆಜಿಲ್ ನ ಖ್ಯಾತ ಫುಟ್ ಬಾಲ್ ಆಟಗಾರ ನೇಮರ್ ಅವರ ಬಹುಕೋಟಿ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಬ್ರೆಜಿಲ್ ನ ಫುಟ್ ಬಾಲ್ ತಾರೆ ನೇಮರ್ (ಸಂಗ್ರಹ ಚಿತ್ರ)
ಬ್ರೆಜಿಲ್ ನ ಫುಟ್ ಬಾಲ್ ತಾರೆ ನೇಮರ್ (ಸಂಗ್ರಹ ಚಿತ್ರ)

ಬ್ರೆಸಿಲಿಯಾ: ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇರೆಗೆ ಬ್ರೆಜಿಲ್ ನ ಖ್ಯಾತ ಫುಟ್ ಬಾಲ್ ಆಟಗಾರ ನೇಮರ್ ಅವರ ಬಹುಕೋಟಿ ಆಸ್ತಿಯನ್ನು ಜಪ್ತಿ ಮಾಡಿದೆ.

ಮೂಲಗಳ ಪ್ರಕಾರ 23 ವರ್ಷದ ವಿಶ್ವವಿಖ್ಯಾತ ಬ್ರೆಜಿಲ್ ಫುಟ್ ಬಾಲ್ ತಂಡದ ಆಟಗಾರ ನೇಮರ್ 2011ರಿಂದ 2013ರ ಅವಧಿಯವರೆಗೆ ಕಟ್ಟಬೇಕಿದ್ದ ಆದಾಯ ತೆರಿಗೆಯನ್ನು ವಂಚಿಸಿದ್ದು, ಇದೇ  ಕಾರಣಕ್ಕಾಗಿ ಅವರಿಗೆ ಸೇರಿದ ಸುಮಾರು 50 ಮಿಲಿಯನ್ ಡಾಲರ್ ಆಸ್ತಿಯನ್ನು ಜಪ್ತಿ ಮಾಡುವಂತೆ ಸಾವೋ ಪೌಲೋಫೆಡರಲ್ ಕೋರ್ಟ್ ಆದೇಶ ನೀಡಿದೆ ಎಂದು ತಿಳಿದುಬಂದಿದೆ. ನೇಮರ್  ಹೆಸರಿನಲ್ಲಿರುವ ಮನೆ, ಭೂಮಿ ಮತ್ತು ಕಂಪನಿಗಳಷ್ಟೇ ಅಲ್ಲದೆ ಖಾಸಗಿ ಜೆಟ್ ವಿಮಾನ, ಯಾಚ್ ಮತ್ತು ಅವರ ಕುಟುಂಬಸ್ಥರ ಹೆಸರಿನಲ್ಲಿರುವ 3 ಕಂಪನಿಗಳು, ಇತರೆ ಆಸ್ತಿಯನ್ನು ಕೂಡ ಬ್ರೆಜಿಲ್  ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

192 ದಶಲಕ್ಷ ಬ್ರೆಜಿಲ್ ರೀಲ್ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಹಿಂಪಡೆಯುವಂತೆ ಫೆಡರಲ್ ಕೋರ್ಟ್‌ಗೆ ನೇಮರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್   ತಿರಸ್ಕರಿಸಿದ್ದು,  ನೇಮರ್‌ರ ಆಸ್ತಿಪಾಸ್ತಿಗಳನ್ನು ಕೋರ್ಟ್ ವಶಕ್ಕೆ ಪಡೆದುಕೊಂಡಿದೆ ಎಂದು ಬ್ರೆಜಿಲ್ ಮಾಧ್ಯಮಗಳು ವರದಿ ಮಾಡಿವೆ. 2011ರಿಂದ 2013ರವರೆಗೆ ಬ್ರೆಜಿನ್‌ನ ಸ್ಯಾಂಟೋಸ್  ಕ್ಲಬ್ ಪರ ಆಡುವ ವೇಳೆ ನೇಮರ್ ಹಾಗೂ ಅವರ ಕುಟುಂಬ 16 ದಶಲಕ್ಷ ಡಾಲರ್ (11 ಕೋಟಿ ರೂ.) ತೆರಿಗೆ ವಂಚಿಸಿತ್ತು ಎಂದು ಆರೋಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ವರ್ಷ ನಡೆದ ವಿಚಾರಣೆಯಲ್ಲಿ ಕೋರ್ಟ್ ನೇಮರ್‌ರನ್ನು ತಪ್ಪಿತಸ್ಥ ಎಂದು ಹೇಳಿತ್ತು.

ಸದ್ಯ ತೆರಿಗೆ ವಂಚನೆಗಾಗಿ 50 ದಶಲಕ್ಷ ಡಾಲರ್ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಕೋರ್ಟ್ ಹೇಳಿದೆ. ಈ ಮೊತ್ತದಲ್ಲಿ ಖಾಸಗಿ ಜೆಟ್, ಯಾಚ್ ಹಾಗೂ ಬ್ರೆಜಿಲ್‌ನ ಸ್ಯಾಂಟೋಸ್,  ಸಾವೋ ವಿಸೆಂಟೆ ಸಮೀಪದ ಕೆಲ ಆಸ್ತಿಪಾಸ್ತಿಗಳು ಸೇರಿವೆ. 24 ವರ್ಷದ ನೇಮರ್ ಇದೇ ಜೆಟ್ ವಿಮಾನದಲ್ಲಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಿಗೆ ಹಾಗೂ ವಿಶ್ರಾಂತಿಯ ವೇಳೆ  ಪ್ರಯಾಣಿಸುತ್ತಿದ್ದರು. ಕಳೆದ ಜುಲೈನಲ್ಲಿ ಕೋಪಾ ಅಮೆರಿಕ ಟೂರ್ನಿಯಲ್ಲಿ ಆಡಲು ಪ್ರಯಾಣ ಮಾಡುವ ಸಲುವಾಗಿ 60 ಕೋಟಿ ರು. ನೀಡಿ ಜೆಟ್ ವಿಮಾನವನ್ನು ಖರೀದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com