ಸಲಿಂಗಿಗಳು ಪ್ರಾಣಿಗಳಿಗಿಂತಲೂ ಕಡೆ: ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋ

ಪ್ರಕೃತಿ ಧರ್ಮಕ್ಕೆ ವಿರೋಧವಾಗಿ ಸಲಿಂಗಕಾಮದಲ್ಲಿ ತೊಡಗುವವರು ಪ್ರಾಣಿಗಳಿಗಿಂತಲೂ ಕಡೆ ಎಂದು ಖ್ಯಾತ ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋ ಹೇಳಿದ್ದಾರೆ...
ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋ (ಸಂಗ್ರಹ ಚಿತ್ರ)
ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋ (ಸಂಗ್ರಹ ಚಿತ್ರ)

ಮನಿಲಾ: ಪ್ರಕೃತಿ ಧರ್ಮಕ್ಕೆ ವಿರೋಧವಾಗಿ ಸಲಿಂಗಕಾಮದಲ್ಲಿ ತೊಡಗುವವರು ಪ್ರಾಣಿಗಳಿಗಿಂತಲೂ ಕಡೆ ಎಂದು ಖ್ಯಾತ ಬಾಕ್ಸರ್ ಮ್ಯಾನ್ನಿ ಪ್ಯಾಕ್ವಿಯೋ ಹೇಳಿದ್ದಾರೆ.

ಸ್ಥಳೀಯ ಟಿವಿ5 ಸುದ್ದಿವಾಹಿನಿಗೆ ವಿಶೇಷ ಸಂದರ್ಶನ ನೀಡುತ್ತಿದ್ದ ವೇಳೆ ಸಲಿಂಗ ಕಾಮಿಗಳ ವಿರುದ್ಧ ಕಿಡಿಕಾರಿರುವ ಮ್ಯಾನ್ನಿ ಪ್ಯಾಕ್ವಿಯೋ, "‘ನೀವು ಎಂದಾದರೂ ಪ್ರಾಣಿಗಳು ಸಲಿಂಗಕಾಮದಲ್ಲಿ  ತೊಡಗಿರುವುದನ್ನು ಕಂಡಿದ್ದೀರಾ? ಪ್ರಕೃತಿಯು ಅವುಗಳನ್ನು ಗಂಡು ಮತ್ತು ಹೆಣ್ಣು ಎಂದು ಪ್ರತ್ಯೇಕಿಸಿದೆ.  ಅದೇ ನಿಯಮವನ್ನು ಅವು ಪಾಲಿಸುತ್ತಿವೆ. ಇದನ್ನು ಅರ್ಥ ಮಾಡಿಕೊಳ್ಳುವ ತಿಳಿವಳಿಕೆ  ಇರಬೇಕು’ ಎಂದು ಕಿಡಿಕಾರಿದ್ದಾರೆ.

ಮ್ಯಾನ್ನಿ ಅವರ ಈ ಹೇಳಿಕೆ ಇದೀಗ ಫಿಲಿಪ್ಪೀನ್ಸ್ ದೇಶದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದು, 37 ವರ್ಷದ ಮ್ಯಾನ್ನಿ ಪ್ಯಾಕ್ವಿಯೋ ವಿರುದ್ಧ ಸಾವಿರಾರು ಸಲಿಂಗಕಾಮಿಗಳು ಪ್ರತಿಭಟನೆ  ನಡೆಸಿದ್ದಾರೆ. ಪ್ರಸ್ತುತ ಫಿಲಿಪ್ಪೀನ್ಸ್ ಸೆನೆಟ್‌ ಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಮ್ಯಾನ್ನಿ ಸ್ಪರ್ಧಿಸಿದ್ದು, ಅವರ ಈ ಹೇಳಿಕೆ ಚುನಾವಣೆಯಲ್ಲಿ ಅವರ ವಿರುದ್ಧ ಪರಿಣಾಮ ಬೀರುವ ಸಾಧ್ಯತೆ ಇದೆ  ಎಂದು ಹೇಳಲಾಗುತ್ತಿದೆ.  ಮ್ಯಾನಿ ಅವರ ಹೇಳಿಕೆಗೆ ಟ್ವಿಟರ್‌ನಲ್ಲಿ  ಹಲವು ಟೀಕೆಗಳೂ ವ್ಯಕ್ತವಾಗುತ್ತಿವೆ.

ಇನ್ನು ಫಿಲಿಪ್ಪೀನ್ಸ್‌ನಲ್ಲಿ ಸಲಿಂಗಿಗಳ ಮದುವೆಯನ್ನು ನಿಷೇಧಿಸಲಾಗಿದ್ದು, ಕ್ಯಾಥೋಲಿಕ್ ಚರ್ಚ್ ಸಲಿಂಗ ಕಾಮ ಮತ್ತು ಮದುವೆಗಳನ್ನು ತೀವ್ರವಾಗಿ ವಿರೋಧಿಸಿದೆ. ದೇಶದ ಜನಸಂಖ್ಯೆಯ ಶೇ  80ರಷ್ಟು ಜನರು ಚರ್ಚ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ದೇಶದ ಕೆಲವು ಸಣ್ಣ ಚರ್ಚ್‌ಗಳಲ್ಲಿ ಸಲಿಂಗ ಕಾಮಿಗಳ ಮದುವೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ  ಸಲಿಂಗಿಗಳ ಮದುವ ಮಾಡುತ್ತಿರುವ ಈ ಚರ್ಚ್‌ಗಳು  ಪ್ರಧಾನ ಚರ್ಚ್ ಅಥವಾ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದಿಲ್ಲ ಎಂದು ವರದಿಗಳು ಹೇಳಿವೆ.

ವಿವಾದದ ಬಳಿಕ ಕ್ಷಮೆ ಕೇಳಿದ ಬಾಕ್ಸರ್
ಇನ್ನು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಫಿಲಿಪ್ಪೀನ್ಸ್ ಭಾರಿ ವಿವಾದ ಏಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮ್ಯಾನ್ನಿ ಪ್ಯಾಕ್ವಿಯೋ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ವಿಷಾಧ  ಕೋರಿದ್ದಾರೆ. ತಾವು ಸಲಿಂಗಿಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಆ ಹೇಳಿಕೆ ನೀಡರಲ್ಲಿಲ. ಆದರೆ ಈಗಲೂ ಸಲಿಂಗಿ ಮದುವೆಗೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com