
ಸಿಡ್ನಿ: ಟಿವಿ ರಿಯಾಲಿಟಿ ಕಾರ್ಯಕ್ರಮವೊಂದರಲ್ಲಿ ಭಾಗವಿಸಿದ್ದ ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್, ಹಾವುಗಳು ತುಂಬಿದ್ದ ಬಾಕ್ಸ್ ಒಳಗೆ ತಲೆ ಇಟ್ಟು, ತಲೆಗೆ ಹಾವು ಕಚ್ಚಿಸಿಕೊಂಡ ಘಟನೆ ನಡೆದಿದೆ.
"ಐ ಆಮ್ ವಿತ್ ಸೆಲೆಬ್ರಿಟಿ... ಗೆಟ್ ಮೇ ಔಟ್ ಆಫ್ ಹಿಯರ್' ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿದ್ದ ವಾರ್ನ್ ನೀಡಿದ್ದ ಟ್ಯಾಸ್ಕ್ ಒಂದರಲ್ಲಿ ಭಾಗವಹಿಸಿದ್ದಾಗ ಹಾವು ಕಚ್ಚಿದೆ.
ಆದರೆ ಕಚ್ಚಿದ ಹಾವು ವಿಷಪೂರಿತವಲ್ಲವಾದರೂ ಗಾಯವನ್ನುಂಟುಮಾಡಬಲ್ಲದಾಗಿತ್ತು.
ವೈದ್ಯರು ಆಂಟಿಸೆಪ್ಟಿಕ್ ನೀಡಿ ಚಿಕತ್ಸೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಸೋಂಕು ತಗಲದಂತೆ ಸುಶೃಷೆ ಮಾಡಲಾಗಿದೆ.
Advertisement