
ಲಂಡನ್: ಸಾಮಾಜಿಕ ಜಾಲತಾಣದಲ್ಲಿ 20 ಕೋಟಿ ಫಾಲೋವರ್ಸ್ ಅನ್ನು ಸಂಪಾದಿಸಿದ ವಿಶ್ವದ ಮೊದಲ ಆಥ್ಲೀಟ್ ಎನ್ನುವ ಖ್ಯಾತಿಗೆ ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಸೂಪರ್ ಸ್ಟಾರ್ ಆಟಗಾರ ಕ್ರಿಶ್ಚಿಯನೊ ರೊನಾಲ್ಡೊ ಪಾತ್ರರಾಗಿದ್ದಾರೆ.
ರೊನಾಲ್ಡೊ ತಮ್ಮ ಫೇಸ್ ಬುಕ್ ಪುಟದಲ್ಲಿ 109.7 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ಟಾಗ್ರಾಮ್ ನಲ್ಲಿ 49.6 ಮಿಲಿಯನ್ ಹಾಗೂ ಟ್ವಿಟರ್ ನಲ್ಲಿ 40.7 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ ಎಂದು ಅಥ್ಲೀಟ್ ಗಳ ಸಾಮಾಜಿಕ ಜಾಲತಾಣಗಳನ್ನು ಟ್ರ್ಯಾಕ್ ಮಾಡುವ ಹೂಕಿಟ್ ಡಾಟ್ ಕಾಮ್ ಕಂಪನಿ ಹೇಳಿದೆ.
Advertisement