ಐಸಿಸಿ ಅಧಿಕಾರಿಗಳ ಪಟ್ಟಿಯಲ್ಲಿ ಶ್ರೀನಾಥ್ ಸೇರಿ 6 ಭಾರತೀಯರಿಗೆ ಸ್ಥಾನ

ಬಹು ನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಸರಣಿಗೆ ಭಾರತ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿ 6 ಮಂದಿ ಭಾರತೀಯರು ಆಧಿಕಾರಿಗಳ ಪಟ್ಟಿಗೆ ಆಯ್ಕೆಯಾಗಿದ್ದಾರೆ...
ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ದುಬೈ: ಬಹು ನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಸರಣಿಗೆ ಭಾರತ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿ 6 ಮಂದಿ ಭಾರತೀಯರು ಆಧಿಕಾರಿಗಳ ಪಟ್ಟಿಗೆ ಆಯ್ಕೆಯಾಗಿದ್ದಾರೆ.

ಟಿ20 ವಿಶ್ವಕಪ್ ಸರಣಿಯಲ್ಲಿ ಐಸಿಸಿ ಪರವಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸುವ ಉನ್ನತ ಮಟ್ಟದ 31 ಅಧಿಕಾರಿಗಳ ಪಟ್ಟಿಯಲ್ಲಿ ಜಾವಗಲ್ ಶ್ರೀನಾಥ್ ಸೇರಿದಂತೆ ಒಟ್ಟು ಆರು ಭಾರತೀಯರು ಆಯ್ಕೆಯಾಗಿದ್ದಾರೆ. ಸ್ಟ್ರಾಂಗ್ ಪ್ಲೇಯಿಂಗ್ ಕಂಟ್ರೋಲ್ ಟೀಮ್ ನಲ್ಲಿ 7 ಮಂದಿ, ತೀರ್ಪುಗಾರು, ಮ್ಯಾಚ್ ರೆಫರಿ ತಂಡದಲ್ಲಿ 12 ಮಂದಿ ಮತ್ತು ಐಸಿಸಿ ಅಂತಾರಾಷ್ಟ್ರೀಯ ಸಮಿತಿಯ ಆಂಪೈರ್ ಸಮಿತಿಯಲ್ಲಿ 10 ಮಂದಿ ಮತ್ತು ಐಸಿಸಿ ಶಿಸ್ತು ಸಮಿತಿಗೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಇಬ್ಬರು ಮಹಿಳಾ ಅಂಪೈರ್ ಗಳನ್ನು ಆಯ್ಕೆ ಮಾಡಿರುವುದು ಈ ಬಾರಿಯ ವಿಶೇಷವಾಗಿದೆ.

ಮುಂಬರುವ ಮಾರ್ಚ್ 8ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಸರಣಿಯ ಮೊದಲ ಪಂದ್ಯ ಜಿಂಬಾಬ್ವೆ ಮತ್ತು ಹಾಂಗ್ ಕಾಂಗ್ ನಡುವೆ ನಡೆಯಲಿದ್ದು, ಈ ಪಂದ್ಯಕ್ಕೆ ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ರೆಫರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ಅಪೈರ್ ಗಳಾದ ಅಲೀಂದಾರ್ ಮತ್ತು ಇಯಾನ್ ಗೌಲ್ಡ್ ಫೀಲ್ಡ್ ಅಂಪೈರ್ ಗಳಾಗಿ ಕಾರ್ಯನಿರ್ವಹಿಸಿದರೆ, ಮರೇಸ್ ಟಿವಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಾರ್ಚ್ 8ರಿಂದ ಆರಂಭವಾಗಿಲಿರುವ ವಿಶ್ವಕಪ್ ಸರಣಿ ಏಪ್ರಿಲ್ 3ರವರೆಗೆ ನಡೆಯಲಿದ್ದು, ಸರಣಿಯಲ್ಲಿ ಇಬ್ಬರು ಮಹಿಳಾ ಅಂಪೈರ್ ಗಳಾದ ನ್ಯೂಜಿಲೆಂಡ್ ನ ಕ್ಯಾಥಲೀನ್ ಕ್ರಾಸ್ ಮತ್ತು ಆಸ್ಟ್ರೇಲಿಯಾದ ಕ್ಲೇರ್ ಪೊಲಾಸಕ್ ಅವರು ಅಂಪೈರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com