ಜೂನ್ ನಲ್ಲಿ ಏಕದಿನ, ಟಿ20 ಸರಣಿ ನಡೆಸಲು ಹೊಸ ಪ್ರಸ್ತಾವನೆ-ಬಿಸಿಸಿಐ ಕಡೆ ಮತ್ತೆ ಪಿಸಿಬಿ ಸ್ನೇಹ ಹಸ್ತ?

ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ತನ್ನ ಈ ಕಾರ್ಯದಲ್ಲಿ ಅದೆಷ್ಟೇ...
ಪಾಕ್ ಕ್ರಿಕೆಟ್ ತಂಡ
ಪಾಕ್ ಕ್ರಿಕೆಟ್ ತಂಡ

ನವದೆಹಲಿ: ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ತನ್ನ ಈ ಕಾರ್ಯದಲ್ಲಿ ಅದೆಷ್ಟೇ ಹಿನ್ನಡೆ, ಅಪಮಾನ, ಟೀಕೆಗಳನ್ನು ಎದುರಿಸಿದರೂ ತನ್ನ ಯತ್ನವನ್ನು ಮಾತ್ರ ನಿಲ್ಲಿಸಿಲ್ಲ.

ಈಗಾಗಲೇ 2015ರ ಅಂತ್ಯಕ್ಕೆ ನಡೆಸಲುದ್ದೇಶಿಸಿದ್ದ ಭಾರತ ಪಾಕಿಸ್ತಾನ ಕ್ರಿಕೆಟ್ ಸರಣಿಯ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ ಅನಾಸಕ್ತಿ ತೋರಿದ್ದರೂ ಮತ್ತೊಂದು ಸರಣಿ ನಡೆಸುವ ಪ್ರಸ್ತಾವನೆಯನ್ನು ಬಿಸಿಸಿಐ ಮುಂದಿಡಲು ನಿರ್ಧರಿಸಲಾಗಿದೆ ಎಂದು ಪಿಸಿಬಿ ಮೂಲಗಳು ಹೇಳಿವೆ.

ಏನಿದು ಹೊಸ ಪ್ರಸ್ತಾವನೆ? : ಹೊಸ ಪ್ರಸ್ತಾವನೆ ಪ್ರಕಾರ, 2016ರ ಜುಲೈ ನಲ್ಲಿ ಮೂರು ಏಕದಿನ ಪಂದ್ಯಗಳ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಜೂನ್ ನಲ್ಲಿ ನಡೆಸಲು ಪಿಸಿಬಿ ಯೋಜಿಸಿದೆ. 2016ರ ಮೇ 29ರಂದು ಇಂಡಿಯನ್ ಪ್ರೀಮಿಯರ್ ಲೀಗ್
(ಐಪಿಎಲ್)ಗೆ ತೆರೆ ಬೀಳಲಿದೆ. ಅದರ ತರುವಾಯವೇ ಪಾಕಿಸ್ತಾನ ವಿರುದ್ಧದ ಸರಣಿಗಳು ಶುರುವಾಗಲಿ ಎಂಬುದು ಪಿಸಿಬಿ ಆಶಯವೆನ್ನಲಾಗಿದೆ.

ಇಂಗ್ಲೆಂಡ್ ನೆಲದಲ್ಲಿ ಸರಣಿ?
: ಕಳೆದ ವರ್ಷಾಂತ್ಯ (2015)ದಲ್ಲಿ ಭಾರತ ಹಾಗೂ ಪಾಕಿಸ್ತಾನ ಸರಣಿಯನ್ನು ದುಬೈನಲ್ಲಿ ನಡೆಸಲುಪಿಸಿಬಿ ಉದ್ದೇಶಿಸಿತ್ತು. ಆದರೆ, ಬಿಸಿಸಿಐ ಮಾತ್ರ ಸರಣಿಯನ್ನು ಶ್ರೀಲಂಕಾದಲ್ಲಿ ನಡೆಸುವ ಇಂಗಿತ ವ್ಯಕ್ತಪಡಿಸಿತ್ತು. ಆದರೆ, ಆನಂತರದ ಬೆಳವಣಿಗೆಗಳಲ್ಲಿ ಅದು ದುಬೈನಲ್ಲೂ ನಡೆಯದೆ, ಶ್ರೀಲಂಕಾದಲ್ಲೂ ನಡೆಯದೇ ಇಡೀ ಪ್ರಸ್ತಾವನೆಯೇ ರದ್ದಾಯಿತು. ಇದೀಗ, ಹೊಸ ಆಲೋಚನೆ ಮಾಡಿರುವ ಪಿಸಿಬಿ, ತಾನು ಮಂಡಿಸಿರುವ ನೂತನ ಪ್ರಸ್ತಾವನೆಯ ಸರಣಿಗಳನ್ನು ಇಂಗ್ಲೆಂಡ್ ನಲ್ಲಿ ನಡೆಸಲು ಯೋಚಿಸಿದೆ.

ಆ ಆಲೋಚನೆಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇ-ಸಿ-ಬಿ) ಬೆಂಬಲ ವ್ಯಕ್ತಪಡಿಸಿರುವುದಾಗಿ ಅದು ಹೇಳಿದೆ. ಈ ಹಿಂದೆಯೂ ಪಿಸಿಬಿಯು 2010ರಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ಸರಣಿಯನ್ನು ಇಂಗ್ಲೆಂಡ್ ನಲ್ಲೇ ನಡೆಸಿತ್ತು. ಹಾಗಾಗಿ, ಇಂಗ್ಲೆಂಡ್ ತನಗೆ ಸರಣಿ
ಆಯೋಜಿಸಲು ಹೆಚ್ಚಿನ ಅನುಕೂಲಕರ ಎಂದು ಪಿಸಿಬಿ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com