ಕಿರಿಯರ ಕ್ರಿಕೆಟಿಗ ಮ್ಯಾಥ್ಯೂ ನಿಧನ

ಉದಯೋನ್ಮುಖ ಹಾಗೂ ಇಂಗ್ಲೆಂಡ್ ನ ಪ್ರಾಂತೀಯ ತಂಡವಾದ ಸಸ್ಸೆಕ್ಸ್ ನ ವೇಗದ ಬೌಲರ್ ಮ್ಯಾಥ್ಯೂ ಹಾಬ್ಡನ್ ಶನಿವಾರ ರಾತ್ರಿ ನಿಧನ ಹೊಂದಿರುವುದಾಗಿ ಸಸ್ಸೆಕ್ಸ್ ಕ್ರಿಕೆಟ್ ಕ್ಲಬ್ ನ ಆಡಳಿತ ಮಂಡಳಿ ತಿಳಿಸಿದೆ.
ಮ್ಯಾಥ್ಯೂ ಹಾಬ್ಡನ್
ಮ್ಯಾಥ್ಯೂ ಹಾಬ್ಡನ್

ಲಂಡನ್: ಉದಯೋನ್ಮುಖ ಹಾಗೂ ಇಂಗ್ಲೆಂಡ್ ನ ಪ್ರಾಂತೀಯ ತಂಡವಾದ ಸಸ್ಸೆಕ್ಸ್ ನ ವೇಗದ ಬೌಲರ್ ಮ್ಯಾಥ್ಯೂ ಹಾಬ್ಡನ್ ಶನಿವಾರ ರಾತ್ರಿ ನಿಧನ ಹೊಂದಿರುವುದಾಗಿ ಸಸ್ಸೆಕ್ಸ್ ಕ್ರಿಕೆಟ್ ಕ್ಲಬ್ ನ ಆಡಳಿತ ಮಂಡಳಿ ತಿಳಿಸಿದೆ.

ಸಾವಿನ ಕಾರಣ ತಿಳಿದುಬಂದಿಲ್ಲ. ಕಾರ್ಡಿಫ್ ನ ವಿಶ್ವವಿದ್ಯಾನಿಲಯವೊಂದರ ವಿದ್ಯಾರ್ಥಿಯಾಗಿದ್ದ ಮ್ಯಾಥ್ಯೂ ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶೀಘ್ರದಲ್ಲೇ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ಇಂಗ್ಲೆಂಡ್ ಹಿರಿಯರ ತಂಡಕ್ಕೆ ನೆಟ್ ಅಭ್ಯಾಸದ ವೇಳೆ ಬೌಲಿಂಗ್ ಮಾಡಲು ಬಂದಿದ್ದ ಕೆಲ ಕ್ರಿಕೆಟಿಗರ ಜತೆ ಮ್ಯಾಥ್ಯೂ ಸಹ ಆಗಮಿಸಿದ್ದರು. ಆಗಲೇ ಈ ಸಾವು ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com