
ಕೇಪ್‍ಟೌನ್: ನಾಯಕ ಹಾಶೀಂ ಆಮ್ಲಾ (ಬ್ಯಾಟಿಂಗ್ 157) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‍ಗೆ ಹೋರಾಟ ನೀಡುತ್ತಿದೆ. ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ 629 ರನ್‍ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನ ಸೋಮವಾರ ಅಂತಿಮ ಅವಧಿ ವೇಳೆಗೆ 129.5 ಓವರ್‍ಗಳಲ್ಲಿ 3 ವಿಕೆಟ್‍ಗೆ 353 ರನ್ ದಾಖಲಿಸಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ ಮೊದಲ ಇನಿಂಗ್ಸ್ 629ಕ್ಕೆ 6 ಡಿ. ದಕ್ಷಿಣ ಆಫ್ರಿಕಾಗೆ ಮೊದಲ ಇನಿಂಗ್ಸ್ 353ಕ್ಕೆ 3 (ಆಮ್ಲಾ ಬ್ಯಾಟಿಂಗ್ 157, ಡಿವಿಲಿಯರ್ಸ್ 88, ಸ್ಟೋಕ್ಸ್ 67ಕ್ಕೆ 1)
Advertisement