ಬೆಂಗಳೂರು ಎಫ್ ಸಿ ಗೆ ಜಯ

ಬೆಂಗಳೂರು ಎಫ್ ಸಿ ಬಿಡಿಎಫ್ ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಜಯ ದಾಖಲಿಸಿದೆ.
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ

ಬೆಂಗಳೂರು: ಪಂದ್ಯದ ಮೊದಲಾರ್ಧದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಸ್ಪೈಕರ್ ಪವನ್ ಶ್ರೀನಿವಾಸ್ ಅವರ ಎರಡು ಆಕರ್ಷಕ ಗೋಳಿನ ನೆರವಿನಿಂದ ಬೆಂಗಳೂರು ಎಫ್ ಸಿ ಬಿಡಿಎಫ್ ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಜಯ ದಾಖಲಿಸಿದೆ.
ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡ 2 -0 ಗೋಲುಗಳ ಅಂತರದಲ್ಲಿ ಅಂತರದಲ್ಲಿ ಸ್ಟೂಡೆಂಟ್ ಯೂನಿಯನ್ ತಂಡವನ್ನು ಮಣಿಸಿತು.
ಬೆಂಗಳೂರು ಎಫ್ ಸಿ ತಂಡದ ಪರ ಪವನ್ 1 ನೇ ಮತ್ತು 23 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇನ್ನು ಸೋಮವಾರ ನಡೆದ ಎ ಡಿವಿಷನ್ ಪಂದ್ಯದಲ್ಲಿ ಜವಾಹರ್ ಯೂನಿಯನ್ ಚಾಲೆಂಜರ್ಸ್ ತಂಡವನ್ನು ಮಣಿಸಿತು. ಯೂನಿಯನ್ ಪರ ಹರಿದಯ್ 69 ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com