ಕರ್ನಾಟಕಕ್ಕೆ ಸತತ ಎರಡನೇ ಜಯ

ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ...
ಕರ್ನಾಟಕ ವಾಲಿಬಾಲ್ ತಂಡ
ಕರ್ನಾಟಕ ವಾಲಿಬಾಲ್ ತಂಡ
Updated on

ಬೆಂಗಳೂರು: ಪಂದ್ಯದಲ್ಲಿ ಪ್ರಭುತ್ವಯುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಪುರುಷರ ವಾಲಿಬಾಲ್ ತಂಡ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‍ಶಿಪ್ ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿದೆ.

ಸೋಮವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ
ಕರ್ನಾಟಕ ತಂಡ 3-0 (25-19, 25-23, 27-25) ಸೆಟ್‍ಗಳ ಅಂತರದಲ್ಲಿ ಜಯಿಸಿತು. ತೀವ್ರ
ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ಯಾವುದೇ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳದೇ ಆಡುವ ಮೂಲಕ ಜಯ ಸಾಧಿಸಿತು.

ಕರ್ನಾಟಕ ತಂಡದ ಪರ ನಾಯಕ ಕಾರ್ತಿಕ್, ಭರತ್ ಮತ್ತು ಶರತ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಜಯದೊಂದಿಗೆ ಕರ್ನಾಟಕ ತಂಡ ಸತತ ಎರಡನೇ ಜಯ ಸಾಧಿಸಿದ್ದು, ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಆರಂಭದಲ್ಲಿ ಸುಲಭ ಮುನ್ನಡೆ ಸಾಧಿಸಿದ ಕರ್ನಾಟಕ ಆಟಗಾರರು 25-19 ಅಂತರದ ಮೇಲುಗೈ ಸಾಧಿಸಿದರು. ನಂತರ ಎದುರಾಳಿಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾದ ಪರಿಣಾಮ ಎರಡನೇ ಸೆಟ್‍ನಲ್ಲಿ 25-23 ಅಂತರದ ರೋಚಕ ಮುನ್ನಡೆ ಪಡೆದರು. ಮೂರನೇ ಸೆಟ್‍ನಲ್ಲಿ ನೀಡಿದ ಸರ್ವೀಸಸ್
ಆಟಗಾರರು ಮತ್ತಷ್ಟು ಹೋರಾಟ ನೀಡಿದ ಪರಿಣಾಮ ರಾಜ್ಯ ತಂಡ 27-25ರ ಮುನ್ನಡೆ ಪಡೆಯಬೇಕಾಯಿತು.

ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡ 3-1 (20-25, 25-20, 26-24, 25-19) ಸೆಟ್‍ಗಳ ಅಂತರದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿತು. ಪಂದ್ಯದ
ಆರಂಭದಲ್ಲಿ ತಂಡ ನಿರಾಸೆ ಅನುಭವಿಸಿದರೂ ನಂತರ ಚೇತರಿಕೆ ಕಂಡಿತು. ಆರಂಭದಲ್ಲಿ
ಮುಗ್ಗರಿಸಿದ ತಮಿಳುನಾಡು ತಂಡ 20-25 ಅಂತರದ ಹಿನ್ನಡೆ ಅನುಭವಿಸಿತು. ಎರಡನೇ
ಸೆಟ್‍ನಲ್ಲಿ ತನ್ನ ಲಯ ಕಂಡುಕೊಂಡ ತಮಿಳುನಾಡು 25-20ರ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿತು. ನಂತರದ ಎರಡು ಸೆಟ್‍ಗಳಲ್ಲೂ ಬಿಗಿ ಹಿಡಿತ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡಿತು. ಇನ್ನು ಮಹಿಳೆಯರ ವಿಭಾಗದ ಪಂದ್ಯದಲ್ಲಿ ರೈಲೇಸ್ ತಂಡ ಪಂಜಾಬ್ ವಿರುದ್ಧ 3-0 (25-9, 25-3, 25-10) ಸೆಟ್‍ಗಳಿಂದ ಸುಲಭ ಜಯ
ತನ್ನದಾಗಿಸಿಕೊಂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com