ಫೈರ್ ಫಾಕ್ಸ್ ವಿರುದ್ಧ ಗೇಲ್ ಮಾನನಷ್ಟ ಮೊಕದ್ದಮೆ

ಅನುಚಿತ ಹೇಳಿಕೆಯಿಂದಾಗಿ ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡಿರುವ ವೆಸ್ಟ್‍ಇಂಡೀಸ್‍ನ ಪ್ರಮುಖ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್...
ಕ್ರಿಸ್ ಗೇಲ್
ಕ್ರಿಸ್ ಗೇಲ್

ಮೆಲ್ಬೋರ್ನ್: ಅನುಚಿತ ಹೇಳಿಕೆಯಿಂದಾಗಿ ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡಿರುವ ವೆಸ್ಟ್‍ಇಂಡೀಸ್‍ನ ಪ್ರಮುಖ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್, ಕಳೆದ ವರ್ಷ ಸಿಡ್ನಿಯಲ್ಲಿ ನಡೆದ ವಿಶ್ವಕಪ್ ಪಂದ್ಯದ ವೇಳೆ ಮಹಿಳೆಯ ಮುಂದೆ ಬೆತ್ತಲಾಗಿದ್ದ ಆರೋಪದ ವರದಿಯನ್ನು ಪ್ರಕಟಿಸಿದ್ದ ಫೈರ್ ಫಾಕ್ಸ್ ಮಾಧ್ಯಮದ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಈ ಕುರಿತು ಗೇಲ್ ಆಸ್ಟ್ರೇಲಿಯಾದ ಖ್ಯಾತ ಮಾಧ್ಯಮ ವಕೀಲ ಮಾರ್ಕ್ ಒಬ್ರೈನ್‍ರನ್ನು ಸಂಪರ್ಕಿಸಿದ್ದಾರೆ. ಇತ್ತೀಚೆಗೆ ಬಿಗ್‍ಬ್ಯಾಷ್ ಟಿ20 ಲೀಗ್ ಪಂದ್ಯದ ವೇಳೆ ನೇರಪ್ರಸಾರದಲ್ಲಿ ನಿರೂಪಕಿಯ ಜತೆ ಸಂದರ್ಶನದ ವೇಳೆ ಅನುಚಿತವಾಗಿ ಮಾತನಾಡಿ 10 ಸಾವಿರ ಅಮೆರಿಕನ್ ಡಾಲರ್ ದಂಡ ತೆತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com