ಸೌತ್ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಫೇಸ್ ಬುಕ್ ನಲ್ಲಿ ಕಿಡ್ನಿ ಮಾರಾಟಕ್ಕಿಟ್ಟ ಸ್ಕ್ವಾಶ್ ಆಟಗಾರ

ಆಟಗಾರ ರವಿ ದೀಕ್ಷಿತ್ ಗೆ ಬೆಂಬಲ ಕೊಡಲು, ಧನ ಸಹಾಯ ಮಾಡಲು ಯಾರೊಬ್ಬರು ಮುಂದೆ ಬಂದಿಲ್ಲ. ಹೀಗಾಗಿ ಈತ ತನ್ನ ಒಂದು ಕಿಡ್ನಿಯನ್ನು ಫೇಸ್ ಬುಕ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.
ಆಟಗಾರ ರವಿ ದೀಕ್ಷಿತ್
ಆಟಗಾರ ರವಿ ದೀಕ್ಷಿತ್
Updated on

ಈತ ರವಿ ದೀಕ್ಷಿತ್, ಉತ್ತರ ಪ್ರದೇಶ ಮೂಲದವನು. 20 ವರ್ಷದ ಯುವಕ. 2010 ರ ಏಷ್ಯನ್ ಜೂನಿಯರ್ ಚ್ಯಾಂಪಿಯನ್ ಶಿಪ್ ನಲ್ಲಿ  ಚಿನ್ನದ ಪದಕ ವಿಜೇತ. ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಹಣ ಪಡೆದುಕೊಳ್ಳಲು ಇಡೀ ದೇಶವೇ ಬೆಚ್ಚಿ ಬೀಳುವಂತ ಕೆಟ್ಟ ಸಾಹಸಕ್ಕೆ ಕೈ ಹಾಕಿದ್ದಾನೆ.

ಮಂದಿನ ತಿಂಗಳು 12 ನೇ ದಕ್ಷಿಣ ಏಷ್ಯಾ ಕ್ರೀಡೆಗಳು ಆರಂಭವಾಗಲಿವೆ. ಗುವಾಹಟಿ, ಅಸ್ಸಾಂ ಮತ್ತು ಶಿಲ್ಲಾಂಗ್ ಹಾಗೂ ಮೇಘಾಲಯ ಗಳಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಈತನಿಗೆ 8 ಲಕ್ಷ ಹಣದ ಅವಶ್ಯಕತೆಯಿದೆ.  ಆದರೆ ಈತನಿಗೆ ಬೆಂಬಲ ಕೊಡಲು ಧನ ಸಹಾಯ ಮಾಡಲು ಯಾರೊಬ್ಬರು ಮುಂದೆ ಬಂದಿಲ್ಲ. ಹೀಗಾಗಿ ಈತ ತನ್ನ ಒಂದು ಕಿಡ್ನಿಯನ್ನು ಫೇಸ್ ಬುಕ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.

ನಾನು ಕಳೆದ 10 ವರ್ಷಗಳಿಂದ ಸ್ಕ್ವಾಶ್ ಆಡುತ್ತಿದ್ದು. ಭಾರತವನ್ನು ಹಲವು ಬಾರಿ ಪ್ರತಿನಿಧಿಸಿದ್ದೇನೆ. ಹಲವು ಪದಕಗಳನ್ನು ಗಳಿಸಿದ್ದೇನೆ, ಆದರೆ ನಾನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲು ಯಾರೊಬ್ಬರು ನನಗೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ರವಿ ದೀಕ್ಷಿತ್ ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಗುವಾಹಟಿಯಲ್ಲಿ ಗೇಮ್ ಆರಂಭವಾಗಲಿದ್ದು. ಅದಕ್ಕಾಗಿ ಚೆನ್ನೈ ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಆದರೆ ಗುವಾಹಟಿಗೆ ತೆರಳಲು ನನಗೆ 8 ಲಕ್ಷ ಹಣದ ಅಗತ್ಯವಿದೆ. ಹೀಗಾಗಿ ನಾನು ನನ್ನ ಒಂದು ಕಿಡ್ನಿಯನ್ನು ಮಾರಾಟಕ್ಕೆ ಇಟ್ಟಿದ್ದೇನೆ. ಅಗತ್ಯವಿರುವವರು ನನ್ನನ್ನು ಸಂಪರ್ಕಿಸಬೇಕೆಂದು ಫೇಸ್ ಬುಕ್ ನಲ್ಲಿ ರವಿ ದೀಕ್ಷಿತ್ ಬರೆದು ಕೊಂಡಿದ್ದಾರೆ. ಇನ್ನು ರವಿ ದೀಕ್ಷಿತ್ ನ ಈ ನಿರ್ಧಾರ ಆತನ ಪೋಷಕರಿಗೆ ಆತಂಕಕ್ಕೆಡೆ ಮಾಡಿಕೊಟ್ಟಿದೆ.

ಭವಿಷ್ಯದ ಬಗ್ಗೆ ಹಲವು ನಿರೀಕ್ಷೆ, ಕನಸುಗಳನ್ನು ಹೊತ್ತಿರುವ ಯುವ ಕ್ರೀಡಾಪಟುವಿಗೆ ಸರ್ಕಾರ ಈಗಲಾದರೂ ಧನ ಸಹಾಯ ಮಾಡಿ ಆತನ ಕನಸನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com