ಪಾಕ್ ಮಾಜಿಗಳ ವಿದ್ಯುಕ್ತ ನಿವೃತ್ತಿ

ಇದೇ ತಿಂಗಳ 28ರಿಂದ ಆರಂಭಗೊಳ್ಳಲಿರುವ ಮಾಜಿ ಕ್ರಿಕೆಟ್ ತಾರೆಗಳ ಸಮಾಗಮದ ಮಾಸ್ಟರ್ಸ್ ಕ್ರಿಕೆಟ್ ಲೀಗ್‍ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕರಾಚಿ: ಇದೇ ತಿಂಗಳ 28ರಿಂದ ಆರಂಭಗೊಳ್ಳಲಿರುವ ಮಾಜಿ ಕ್ರಿಕೆಟ್ ತಾರೆಗಳ ಸಮಾಗಮದ ಮಾಸ್ಟರ್ಸ್ ಕ್ರಿಕೆಟ್ ಲೀಗ್‍ನಲ್ಲಿ ಪಾಲ್ಗೊಳ್ಳಲು ಅಗತ್ಯವಾದ ನಿರಾಪೇಕ್ಷಣಾ ಪತ್ರವನ್ನು ನೀಡಲು ನಿರಾಕರಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ಮಾಜಿ ಕ್ರಿಕೆಟರ್ಗಳು ತಿರುಗಿಬಿದ್ದಿದ್ದಾರೆ. 
ಪಿಸಿಬಿಯ ಧೋರಣೆ ಖಂಡಿಸಿರುವ ಮಾಜಿ ಕ್ರಿಕೆಟಿಗರಾದ ರಾಣಾ ನವೀದ್, ಹುಮಾಯೂನ್ ಫರ್ಹಾತ್ ಹಾಗೂ ಮಹಮ್ಮದ್ ಖಲೀಲ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳಿಂದ ವಿದ್ಯುಕ್ತ ನಿವೃತ್ತಿ ಘೋಷಿಸಿದ್ದಾರೆ. 
ಬುಧವಾರ ಪಿಸಿಬಿಯ ಮುಖ್ಯ ಕಾರ್ಯ ನಿರ್ವಾಹಕ ಸುಭಾನ್ ಅಹ್ಮದ್ ಅವರನ್ನು ಭೇಟಿಯಾಗಿ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com