ಮುಂದಿನ ವರ್ಷ ಭಾರತದಲ್ಲಿ ನಡೆಯುವ ಕ್ರಿಕೆಟ್ ಸರಣಿಯಲ್ಲಿ ಪಾಕ್ ಭಾಗವಹಿಸಲ್ಲ: ಪಿಸಿಬಿ

2017ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಉದ್ದೇಶಿತ ಕ್ರಿಕೆಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ...
ನಜಂ ಸೇಥಿ
ನಜಂ ಸೇಥಿ

ಕರಾಚಿ: 2017ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಉದ್ದೇಶಿತ ಕ್ರಿಕೆಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ನಜಂ ಸೇಥಿ ತಿಳಿಸಿದ್ದಾರೆ.

ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಭಾರತ ಒಲವು ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ವೇಳಾಪಟ್ಟಿಯ ಪ್ರಕಾರ ಪಾಕ್ ತಂಡ 2017ರಲ್ಲಿ ಭಾರತಕ್ಕೆ ಆಗಮಿಸಿ ದ್ವಿಪಕ್ಷೀಯ ಸರಣಿಯನ್ನಾಡಬೇಕಿದೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2015ರ ಡಿಸೆಂಬರ್ ತಿಂಗಳಲ್ಲಿ ಸರಣಿ ನಡೆಸುವ ವಿಚಾರದಲ್ಲಿ ಬದ್ಧತೆಯನ್ನು ತೋರಿಸದ ಹಿನ್ನೆಲೆಯಲ್ಲಿ 2017ರಲ್ಲಿ ಭಾರತಕ್ಕೆ ತಂಡವನ್ನು ಕಳುಹಿಸದಿರಲು ಪಿಸಿಬಿ ನಿರ್ಧರಿಸಿದೆ ಎಂದು ಸೇಥಿ ಹೇಳಿದ್ದಾರೆ.

''ನಾವು ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಅವರು ನೀಡಿರುವ ವಾಗ್ದಾನ ನೆರವೇರಿಸಬೇಕು. ನಾಲ್ಕು ತವರು ಸರಣಿಗಳನ್ನು ಆಡುವುದಾಗಿ ಒಪ್ಪಂದದ ವೇಳೆ ಬಿಸಿಸಿಐ ತಿಳಿಸಿತ್ತು. ಯುಎಇ, ಶ್ರೀಲಂಕಾ ಅಥವಾ ಬೇರೆ ಸ್ಥಳಗಳಲ್ಲಿ ಆಡಲು ನಾವು ಸಿದ್ಧ. ಆದರೆ ಅವರು ಒಪ್ಪಂದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು,'' ಎಂದು ಸೇಥಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದಿನ ಒಪ್ಪಂದದ ಪ್ರಕಾರ 2015ರಿಂದ 2023ರ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆರು ದ್ವಿಪಕ್ಷೀಯ ಸರಣಿಗಳನ್ನಾಡಬೇಕಿದೆ. ಇದರಂತೆ 2015ರಲ್ಲಿ ಮೊದಲ ಸರಣಿಗೆ ಪಾಕ್ ಆತಿಥ್ಯ ವಹಿಸಬೇಕಿತ್ತು. ಆದರೆ ಪಾಕ್‌ನ ಆತಿಥ್ಯ ತಾಣವಾದ ಯುಎಇನಲ್ಲಿ ಆಡಲು ಬಿಸಿಸಿಐ ಸಿದ್ಧವಿರಲಿಲ್ಲ. ಆದರೆ ಶ್ರೀಲಂಕಾದಲ್ಲಿ ಆಡಲು ಸಿದ್ಧ ಎಂದು ತಿಳಿಸಿತ್ತು. ಆದರೆ ಪಾಕ್ ವಿರುದ್ಧದ ಸರಣಿಗೆ ಭಾರತ ಸರಕಾರದಿಂದ ಒಪ್ಪಿಗೆ ಸಿಕ್ಕಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com