ಇಂಗ್ಲೆಂಡ್ ಗೆ ಸರಣಿ ಜಯ; ದ.ಆಫ್ರಿಕಾ ತಂಡಕ್ಕೆ ಹೀನಾಯ ಸೋಲು

ಸ್ಟುವರ್ಟ್ ಬ್ರಾಡ್ ಸಂಘಟಿಸಿದ ಮಾರಕ ದಾಳಿಯ ಬಲದಿಂದ ಪ್ರವಾಸಿ ಇಂಗ್ಲೆಂಡ್, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳ ...
ಇಂಗ್ಲೆಂಡ್ ಕ್ರಿಕೆಟ್ ತಂಡ
ಇಂಗ್ಲೆಂಡ್ ಕ್ರಿಕೆಟ್ ತಂಡ

ಜೊಹಾನ್ಸ್‌ಬರ್ಗ್: ಸ್ಟುವರ್ಟ್ ಬ್ರಾಡ್ ಸಂಘಟಿಸಿದ ಮಾರಕ ದಾಳಿಯ ಬಲದಿಂದ ಪ್ರವಾಸಿ ಇಂಗ್ಲೆಂಡ್,  ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೂರೇ ದಿನಗಳಲ್ಲಿ ಆತಿಥೇಯರನ್ನು ಬಗ್ಗು ಬಡಿದ ಇಂಗ್ಲೆಂಡ್, ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 4 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಡಿಸಿಕೊಂಡಿತು. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 241 ರನ್‌ಗಳಿಂದ ಗೆದ್ದಿದ್ದರೆ, ಎರಡನೇ ಟೆಸ್ಟ್ ಡ್ರಾಗೊಂಡಿತ್ತು.

ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 3ನೇ ದಿನವಾದ ಶನಿವಾರ, 10 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (17ಕ್ಕೆ6) ಅವರ ದಾಳಿಗೆ ಧೂಳೀಪಟಗೊಂಡಿತು. ಬ್ರಾಡ್ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ 6 ಆಟಗಾರರಾದ ಡೀನ್ ಎಲ್ಗರ್ (15), ಸ್ಟಿಯಾನ್ ವ್ಯಾನ್‌ಜಿಲ್ (11), ಹಶೀಮ್ ಆಮ್ಲಾ (5), ನಾಯಕ ಎಬಿ ಡಿ'ವಿಲಿಯರ್ಸ್ (0), ಫಾಫ್ ಡು'ಪ್ಲೆಸಿಸ್ (14) ಮತ್ತು ತೆಂಬಾ ಬವೂಮ (0) ಅವರನ್ನು ಪೆವಿಲಿಯನ್‌ಗಟ್ಟಿದರು. ಬ್ರಾಡ್ ದಾಳಿಗೆ ಕುಸಿದ ಹರಿಣ ಪಡೆ 2ನೇ ಇನಿಂಗ್ಸ್‌ನಲ್ಲಿ ಕೇವಲ 83 ರನ್‌ಗಳಿಗೆ ಆಲ್‌ಔಟ್ ಆಯಿತು. 74 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್, 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು.

ಮೊದಲು ದಕ್ಷಿಣ ಆಫ್ರಿಕಾ ತಂಡದ ಪ್ರಥಮ ಇನಿಂಗ್ಸ್ ಮೊತ್ತವಾದ 313 ರನ್‌ಗಳಿಗೆ ಪ್ರತಿಯಾಗಿ ಪ್ರವಾಸಿ ಪಡೆ, ತನ್ನ ಮೊದಲ ಸರದಿಯಲ್ಲಿ 323 ರನ್‌ಗಳಿಗೆ ಆಲ್‌ಔಟ್ ಆಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೊ ರೂಟ್ (110) ಶತಕ ವೃತ್ತಿಜೀವನದ 9ನೇ ಶತಕ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ: 313 ಮತ್ತು 2ನೇ ಇನಿಂಗ್ಸ್ 33.1 ಓವರ್‌ಗಳಲ್ಲಿ 83 (ಡೀನ್ ಎಲ್ಗರ್ 15, ಕಗಿಸೊ ರಬಾಡ 16; ಸ್ಟುವರ್ಟ್ ಬ್ರಾಡ್ 17ಕ್ಕೆ6, ಬೆನ್ ಸ್ಟೋಕ್ಸ್ 24ಕ್ಕೆ2).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com