ವಿಶ್ವ ಟೆನಿಸ್‍ಗೆ ಕಳ್ಳಾಟದ ಸೋಂಕು!

ವರ್ಷದ ಮೊಟ್ಟಮೊದಲ ಗ್ರಾಂಡ್‍ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯಾ ಓಪನ್ ಸೋಮವಾರ ಶುರುವಾಗುವುದರ ಬೆನ್ನಿಗೇ ಟೆನಿಸ್‍ಗೂ ಮ್ಯಾಚ್ ಫಿಕ್ಸಿಂಗ್ ಸೋಂಕು ತಗಲಿತ್ತು ಎಂಬ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದ್ದು, ವಿಶ್ವ ಟೆನಿಸ್ ರಂಗವನ್ನು ಬೆಚ್ಚಿಬೀಳಿಸಿದೆ...
ಗ್ರಾಂಡ್‍ಸ್ಲಾಮ್ ಆಟಗಾರರ ಮೋಸದಾಟದ ಕುರಿತು ಸೆರೆನಾ ವಿಲಿಯಮ್ಸ್ ದಿಗ್ಭ್ರಮೆ
ಗ್ರಾಂಡ್‍ಸ್ಲಾಮ್ ಆಟಗಾರರ ಮೋಸದಾಟದ ಕುರಿತು ಸೆರೆನಾ ವಿಲಿಯಮ್ಸ್ ದಿಗ್ಭ್ರಮೆ

ಮೆಲ್ಬೊರ್ನ್: ವರ್ಷದ ಮೊಟ್ಟಮೊದಲ ಗ್ರಾಂಡ್‍ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯಾ ಓಪನ್ ಸೋಮವಾರ ಶುರುವಾಗುವುದರ ಬೆನ್ನಿಗೇ ಟೆನಿಸ್‍ಗೂ ಮ್ಯಾಚ್ ಫಿಕ್ಸಿಂಗ್ ಸೋಂಕು ತಗಲಿತ್ತು ಎಂಬ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದ್ದು, ವಿಶ್ವ ಟೆನಿಸ್ ರಂಗವನ್ನು ಬೆಚ್ಚಿಬೀಳಿಸಿದೆ.

ಕಳೆದೊಂದು ದಶಕದಲ್ಲಿ ವಿಶ್ವ ಶ್ರೇಯಾಂಕದ ಅಗ್ರ 50ರಲ್ಲಿ ಕಾಣಿಸಿಕೊಂಡ ಆಟಗಾರರ ಪೈಕಿ ಕನಿಷ್ಠ 16 ಮಂದಿ ಕಳ್ಳಾಟದಲ್ಲಿ ಭಾಗಿಯಾಗಿದ್ದರೆಂದು ಬಿಬಿಸಿ ಹಾಗೂ ಬಜ್ ಫೀಡ್ ನ್ಯೂಸ್ ವರದಿ ಮಾಡಿವೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್‍ನಲ್ಲೇ ಈ ಕಳ್ಳಾಟದ ಆರೋಪ ಎದುರಿಸುತ್ತಿರುವ 8 ಮಂದಿ ಆಟಗಾರರು ಭಾಗಿಯಾಗಿದ್ದಾರೆ ಎಂಬುದನ್ನು ಬಜ್‍ ಫೀಡ್‍ನ ವರದಿಗಾರರಾದ ಹೆಡಿನ್ ಬ್ಲೇಕ್ ಹಾಗೂ ಜಾನ್ ಟೆಂಪ್ಲನ್ ಅವರ 26 ಸಾವಿರ ಪಂದ್ಯಗಳ ತನಿಖಾ ವರದಿ ತಿಳಿಸಿದೆ ಎನ್ನಲಾಗಿದೆ.

ಆದರೆ, ಈ ಮ್ಯಾಚ್‍ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ಆಟಗಾರರ ಹೆಸರನ್ನು ಮಾತ್ರ ಇವೆರಡು ನ್ಯೂಸ್ ಏಜೆನ್ಸಿಗಳು ಬಹಿರಂಗಪಡಿಸಿಲ್ಲ. ಆಟಗಾರರ ದೂರವಾಣಿ ಕರೆ, ಬ್ಯಾಂಕ್ ಖಾತೆ ಹಾಗೂ ಕಂಪ್ಯೂಟರ್ ದಾಖಲೆಗಳನ್ನು ಪರಿಶೀಲಿಸದೆ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಕಳ್ಳಾಟಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಪೂರಕ ದಾಖಲೆಗಳು ಲಭ್ಯವಾಗಿವೆ ಎಂದು ಈ ಸುದ್ದಿಸಂಸ್ಥೆಗಳು ತಿಳಿಸಿವೆ. ಇನ್ನು ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ವೇಳೆ ಸುಮಾರು ಎಂಟುಮಂದಿ ಆಟಗಾರರ ಆಟದ ವೈಖರಿ ಶಂಕಾಸ್ಪದವಾಗಿತ್ತು ಎನ್ನಲಾಗಿದೆ.

ಮೊದಲ ಫಿಕ್ಸಿಂಗ್?:
2007ರ ಆಗಸ್ಟ್ ನಲ್ಲಿ ನಡೆದಿದ್ದ ಆರೆಂಜ್ ಪ್ರೋಕೊಮ್ ಓಪನ್ ಎಂಬ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆಟಗಾರರಾದ ನಿಕೋಲೆ ಡೆವಿಡೆಂಕೋ ಹಾಗೂ ಮಾರ್ಟಿನ್ ವಸ್ಸಾಲೋ ನಡುವಣದ ಪಂದ್ಯದ ವೇಳೆ ಮೊಟ್ಟಮೊದಲ ಬಾರಿಗೆ ಕಳ್ಳಾಟದ ವಾಸನೆ ಕಂಡುಬಂದಿತ್ತೆನ್ನಲಾಗಿದೆ. ಗಾಯಗೊಂಡಿದ್ದೇನೆ ಎಂದು ಡೆವಿಡೆಂಕೋ ಆಟದ ಮಧ್ಯೆಯೇ ಹಿಮ್ಮೆಟ್ಟಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಪೆಷನಲ್ಸ್ (ಎಟಿಪಿ) - ವೃತ್ತಿಪರ ಟೆನಿಸ್ ಆಟಗಾರರ ಸಂಸ್ಥೆ ಈ ಕುರಿತು ಸುದೀರ್ಘ ವಿಚಾರಣೆ ನಡೆಸಿ 2008ರ ಸೆಪ್ಟೆಂಬರ್‍ನಲ್ಲಿ ಸೂಕ್ತ ಪುರಾವೆ ಇಲ್ಲದೆ ಡೆವಿಡೆಂಕೋ ಅವರನ್ನು ದೋಷಮುಕ್ತಗೊಳಿಸಿತ್ತು. ಪರೀಕ್ಷೆಗೆ ಚೆನ್ನೈ ಓಪನ್ ಕ್ರೀಡೆಯ ಕರಾಳ ಮುಖವಾಗಿರುವ ಮ್ಯಾಚ್ ಫಿಕ್ಸಿಂಗ್ ಪ್ರಕರಣ ವಿಶ್ವ ಟೆನಿಸ್ ಅನ್ನು ಪೇಚಿಗೆ ಸಿಲುಕಿಸಿರುವ ಸಂದರ್ಭದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಚೆನ್ನೈ ಓಪನ್ ಟೆನಿಸ್ ಟೂರ್ನಿಯನ್ನು ಈ ಕೃತ್ಯಕ್ಕೆ ವೇದಿಕೆಯಾಗಿ ಬಳಸಿರುವ ಸಾಧ್ಯತೆಗಳಿವೆ ಎಂಬ ಅನುಮಾನದಿಂದ ಈ ಟೂರ್ನಿಯನ್ನು ಪರಿಶೀಲಿಸಲಾಗುವುದು ಎಂದು ಸಿಎನ್ ಎನ್ ಐಬಿಎನ್ ವಾಹಿನಿ ವರದಿ ಮಾಡಿದೆ.

ಈ ಟೂರ್ನಿಯಲ್ಲಿ ಈ ಹಿಂದೆ ರಾಫೆಲ್ ನಡಾಲ್, ಕಾರ್ಲೊಸ್ ಮೊಯಾ, ಪ್ಯಾಟ್ರಿಕ್ ರಾಫ್ಟರ್‍ರಂತಹ ಖ್ಯಾತ ಆಟಗಾರರು ಭಾಗವಹಿಸುತ್ತಿದ್ದರು. ಈಗ ಎರಡು ಗ್ರ್ಯಾಂಡ್ ಸ್ಲಾಮ್ ವಿಜೇತ ಸ್ಟಾನಿಸ್ಲಾಸ್ ವಾವ್ರಿಂಕಾ ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಈ ಟೂರ್ನಿಗೆ ಫಿಕ್ಸಿಂಗ್ ಕರಿ ನೆರಳು ಬಿದ್ದಿರುವ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com