ವೋಜ್ವಿಯಾಕಿ, ಸ್ಟೀಫನ್ಸ್ ಗೆ ಆಘಾತ

ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯಾದ ಆಸ್ಟ್ರೇಲಿಯಾದ ಓಪನ್ ಮೊದಲ ದಿನದಂದೇ ಅಚ್ಚರಿದಾಯಕ ಫಲಿತಾಂಶ ಹೊರಬಿದ್ದಿವೆ...
ವೋಜ್ವಿಯಾಕಿ, ಸ್ಟೀಫನ್ಸ್ ಗೆ ಆಘಾತ
ವೋಜ್ವಿಯಾಕಿ, ಸ್ಟೀಫನ್ಸ್ ಗೆ ಆಘಾತ

ಮೆಲ್ಬೋರ್ನ್: ವರ್ಷದ ಮೊಟ್ಟ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯಾದ ಆಸ್ಟ್ರೇಲಿಯಾದ ಓಪನ್ ಮೊದಲ ದಿನದಂದೇ ಅಚ್ಚರಿದಾಯಕ ಫಲಿತಾಂಶ ಹೊರಬಿದ್ದಿವೆ.

ಪ್ರಶಸ್ತಿ ಫೇವರಿಟ್ ಎನಿಸಿರುವ, ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರಾದ ಸರ್ಬಹಿಯಾದ ನೊವಾಕ್ ಜೊಕೊವಿಚ್ ಮತ್ತು ಅಮೆರಿಕದ ಸೆರೆನಾ ವಿಲಿಯಮಸ್ ನಿರೀಕ್ಷಿತ ಗೆಲುವಿನೊಂದಿಗೆ ಶುಭಾರಂಭ ಮಾಡಿದರೆ, ಡೆನ್ಮಾರ್ಕ್ ನ ಕೆರೋಲಿನ್ ವೋಜ್ನಿಯಾಕಿ ಮತ್ತು ಅಮೆರಿಕದ ಆಟಗಾರ್ತಿ ಸ್ಲೊವಾನಿ ಸ್ಟೀಫನ್ಸ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದ್ದಾರೆ.

ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 22ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರೆನಾ, ಇಟಲಿಯ ಕೆಮಿಲಾ ಗಿಯೊರ್ಗಿ ಎದುರು 6-4, 7-5 ಸೆಟ್ ಗಳಿಂದ ಜಯ ಪಡೆದರೆ, ಪುರುಷರ ವಿಭಾಗದಲ್ಲಿ ಜೊಕೊವಿಚ್ 6-3, 6-2, 6-4 ರ ಮೂರು ನೇರ ಸೆಟ್ ಗಳಲ್ಲಿ 51ನೇ ವಿಶ್ವ ಶ್ರೇಯಾಂಕಿತ ದ.ಕೊರಿಯಾದ ಹಯೊನ್ ಚುಂಗ್ ಎದುರು ಜಯಿಸಿ ದ್ವಿತೀಯ ಸುತ್ತಿಗೆ ಮುನ್ನಡೆದರು.

ಭಾರತದ ಸಿಂಗಲ್ಸ್ ಸವಾಲು ಅಂತ್ಯ: ಇತ್ತ ವರ್ಷದ ಮೊದಲ ಗ್ರಾಂಡ್‍ಸ್ಲಾಮ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತ ನೀರಸ ಆರಂಭ ಪಡೆದಿದೆ. ಮಾರ್ಗರೆಟ್ ಕೋರ್ಟ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಯೂಕಿ ಭಾಂಬ್ರಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ಎದುರು 5-7, 1-6, 2-6 ಸೆಟ್‍ಗಳಿಂದ ಸೋಲನುಭವಿಸಿದರು. ಒಂದು ತಾಸು 45 ನಿಮಿಷಗಳ ಕಾಲದ ಮೊದಲ ಸೆಟ್‍ನಲ್ಲಿ ದಿಟ್ಟ ಪೈಪೋಟಿ ನೀಡಿದ ಭಾಂಬ್ರಿ, ಆನಂತರದ ಎರಡೂ ಸೆಟ್‍ಗಳಲ್ಲಿ ಜೆಕ್ ಗಣರಾಜ್ಯದ ಆಟಗಾರನೆದುರು ದುರ್ಬಲ ಆಟವಾಡಿ ಸೋಲಪ್ಪಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com