
ವೆಲ್ಲಿಂಗ್ಟನ್: ಪಾಕಿಸ್ತಾನದ ವಿರುದ್ಧದ ಟಿ 20 ಸರಣಿಯನ್ನು ನ್ಯೂಜಿಲೆಂಡ್ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.
ಜ.22 , ಶುಕ್ರವಾರದಂದು ನಡೆದ ಮೂರನೇ ಹಾಗು ಅಂತಿಮ ಟಿ 20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು 95 ರನ್ ಗಳ ಅಂತರದಿಂದ ಪರಾಭವಗೊಳಿಸಿದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಕೊರಿ ಆಂಡರ್ಸನ್ ಅವರ ಅಜೇಯ 82 ರನ್ ಗಳ ನೆರವಿನಿಂದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 196 ರನ್ ಗಳನ್ನು ಕಲೆಹಾಕಿತು.
ನ್ಯೂಜಿಲೆಂಡ್ ನೀಡಿದ ಗಿರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 17 ಓವರ್ ನಷ್ಟಕ್ಕೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 101 ರನ್ ಗಳನ್ನಷ್ಟೇ ದಾಖಲಿಸಿತು.
Advertisement