ಅಂಧರ ಟಿ 20 ಪಂದ್ಯ : ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತ

ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಏಷ್ಯಾ ಅಂಧರ ಟಿ 20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತ
ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತ

ಬೆಂಗಳೂರು: ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ  ಏಷ್ಯಾ ಅಂಧರ ಟಿ 20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ  ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ(ಜ.24 ) ರಂದು ನಡೆದ  ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 41 ರನ್ ಗಳಿಂದ ಪರಾಭವಗೊಳಿಸಿದ ಭಾರತ ತಂಡ ಪ್ರಶಸ್ತಿಯನ್ನು ಗಳಿಸಿದೆ.
ನಿಗದಿತ 20 ಓವರ್ ಗಳ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಐದು ವಿಕೆಟ್ ನಷ್ಟಕ್ಕೆ 209 ರನ್ ಗಳ ದೊಡ್ಡ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಲು ಕ್ರಿಸ್ ಗೆ ಇಳಿದ ಪಾಕಿಸ್ತಾನ, 18 .4 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 163 ರನ್ ಮಾತ್ರ ಗಳಿಸಿತು. ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ದೀಪಕ್ 30 ಎಸೆತಗಳಲ್ಲಿ 40 ರನ್ ಸಿಡಿಸಿ, ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಗಣನೀಯ ನೆರವು ನೀಡಿದರು. ಇವರ ಆಕ್ರಮಣಕಾರಿ ದಾಳಿಗೆ ಕೈಜೋಡಿಸಿದ  ವೆಂಕಟೇಶ್ 29 ಎಸೆತಗಳಲ್ಲಿ 36 ರನ್, ಅಜಯ್ ರೆಡ್ಡಿ 16 ಎಸೆತಗಳಲ್ಲಿ 34 ರನ್, ಕೇತನ್ ಪಟೇಲ್ 22 ಎಸೆತಗಳಲ್ಲಿ 34 ರನ್ ಹಾಗೂ ಅನಿಲ್ 16 ಎಸೆತಗಳಲ್ಲಿ 25 ರನ್ ಗಳಿಸಿ ತಂಡಕ್ಕೆ ನೆರವಾದರು.
ಭಾರತದ ಇನ್ನಿಂಗ್ಸ್ ನಂತರ ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡಕ್ಕೆ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಸವಾಲೆಸೆದರು. ಪಾಕಿಸ್ತಾನದ ಐವರು ಬ್ಯಾಟ್ಸ್ ಮ್ಯಾನ್ ಗಳು ರನೌಟ್ ಆಗಿದ್ದು ಭಾರತೀಯ ಆಟಗಾರರ ರಕ್ಷಣಾತ್ಮಕ ಆಟಕ್ಕೆ ಹಿಡಿದ ಕನ್ನಡಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com