ಆಂಡಿ ಮರ್ರೆ
ಆಂಡಿ ಮರ್ರೆ

ರೋನಿಕ್, ಮರ್ರೆ ಕ್ವಾರ್ಟರ್ ಫೈನಲ್ ಗೆ

ಮಾಜಿ ಚಾಂಪಿಯನ್ ಸ್ವಿಟ್ಜರ್ಲೆಂಡ್ ನ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಸವಾಲಿಗೆ ತೆರೆಬಿದ್ದಿದೆ.
Published on

ಮೆಲ್ಬೋರ್ನ್: ವಿಶ್ವದ ಹದಿನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ವರ್ಷದ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯ ಆಸ್ಟ್ರೇಲಿಯನ್ ಓಪನ್ ನಲ್ಲಿ  ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಮಾಜಿ ಚಾಂಪಿಯನ್ ಸ್ವಿಟ್ಜರ್ಲೆಂಡ್ ನ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಸವಾಲಿಗೆ ತೆರೆಬಿದ್ದಿದೆ.

ಟೂರ್ನಿಯ ಎಂಟನೇ ದಿನ ಮೆಲ್ಬೋರ್ನ್ ನ ರಾಡ್ ಲೇವರ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಯುವ ಆಟಗಾರ ಮಿಲಾಸ್ ರೋನಿಕ್ ಎದುರಿನ ಐದು ಸೆಟ್ ಗಳ ರೋಚಕ ಸೆಣಸಾಟದಲ್ಲಿ ಅವರು 4 -6 3 -6 , 7 -5 , 6 -4 ಮತ್ತು 3 -6 ರಿಂದ ಸೋಲನುಭವಿಸಿದರು.
   
ಜಗತ್ತಿನ ನಾಲ್ಕನೇ ಶ್ರೇಯಾಂಕಿತ ಆಟಗಾರ ವಾವ್ರಿಂಕಾ ನಿರ್ಗಮನ ಪಂದ್ಯಾವಳಿಯ ಮತ್ತೊಂದು ಮಹಾನ್ ದಿಗ್ಬ್ರಮೆಗಳಲ್ಲಿ ಒಂದೆನಿಸಿದೆ.

2014 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ವಾವ್ರಿಂಕಾ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ರೊಲಾಂಡ್ ಗ್ಯಾರೋಸ್ ನಲ್ಲಿ ಪ್ರಶಸ್ತಿ ಜಯಿಸಿದ್ದ ವಾವ್ರಿಂಕಾ ಭಾರತದಲ್ಲಿ ಇತ್ತೀಚೆಗೆ ನಡೆದಿದ್ದ ಚೆನ್ನೈ ಓಪನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಆಸ್ಟ್ರೇಲಿಯನ್ ಓಪನ್ ಗೆ ಪ್ರವೇಶಿಸಿದ್ದರು. ಆದರೆ ವಾವ್ರಿಂಕಾ ವಿರುದ್ಧ ರೋನಿಕ್ ಮನೋಜ್ಞ ಆಟವಾಡಿ ಜಯ ಸಾಧಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್ ನ ನಂ.1 ಆಟಗಾರ ಆಂಡಿ ಮರ್ರೆ ಕೂಡ ಅಂತಿಮ ಎಂಟರ ಹಂತಕ್ಕೇರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com