ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಗೆ ಕೇರಳ ಕ್ರೀಡಾ ಸಚಿವರಿಂದ ಅವಾಚ್ಯ ಪದ ಬಳಕೆ?

ಭಾರತದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳದ ಕ್ರೀಡಾ ಸಚಿವ ಇ. ಪಿ. ಜಯರಾಜನ್ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಅಂಜು ಬಾಬಿ ಜಾರ್ಜ್ ಮತ್ತು ಕ್ರೀಡ ಸಚಿವ ಜಯರಾಜನ್ (ಸಂಗ್ರಹ ಚಿತ್ರ)
ಅಂಜು ಬಾಬಿ ಜಾರ್ಜ್ ಮತ್ತು ಕ್ರೀಡ ಸಚಿವ ಜಯರಾಜನ್ (ಸಂಗ್ರಹ ಚಿತ್ರ)

ತಿರುವನಂತಪುರಂ: ಭಾರತದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳದ ಕ್ರೀಡಾ ಸಚಿವ ಇ. ಪಿ. ಜಯರಾಜನ್  ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು  ಆರೋಪಿಸಿ ದೂರು ದಾಖಲಿಸಲಾಗಿದೆ.

ಮೂಲತಃ ಕೇರಳದವರಾದ ಮಾಜಿ ಒಲಿಂಪಿಕ್ಸ್ ಪಟು ಅಂಜು ಬಾಬಿ ಜಾರ್ಜ್ ಪ್ರಸ್ತುತ ಕೇರಳ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷೆಯಾಗಿದ್ದು, ಇದೀಗ ಕೇರಳ ಕ್ರೀಡಾ ಸಚಿವ ಇ. ಪಿ. ವಿಜಯರಾಜನ್  ಅವರ ವಿರುದ್ಧ ಹಲವು ಆರೋಪಗಳನ್ನು ಹೊರಿಸಿ ಅವರ ಮೇಲೆ ಕಿಡಿಕಾರಿದ್ದಾರೆ. "ಕ್ರೀಡಾ ಸಚಿವ ಇ. ಪಿ. ಜಯರಾಜನ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮಾನಸಿಕ ಕಿರುಕುಳ  ನೀಡುತ್ತಿದ್ದಾರೆ ಎಂದು ಅಂಜು ಆರೋಪಿಸಿದ್ದಾರೆ.

"ನಾನು ಕಾಂಗ್ರೆಸ್, ಬಿಜೆಪಿ ಅಥವಾ ಸಿಪಿಎಂ ಪಕ್ಷಗಳ ಕಾರ್ಯಕರ್ತೆಯಲ್ಲ. ಯಾವ ಪಕ್ಷಕ್ಕೂ ಸೇರಿದವಲ್ಲ. ನನ್ನ ಶಾಶ್ವತ ಪಕ್ಷ ಕ್ರೀಡೆಯಾಗಿದ್ದು, ಇದಕ್ಕಾಗಿಯೇ ನಾನು ಜೀವನ ಪರ್ಯಂತ  ದುಡಿಯುತ್ತೇನೆ. ಆದರೆ ಕೇರಳದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕ್ರೀಡಾಭಿವೃದ್ಧಿಗೆ ಮಾರಕವಾಗಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕ್ರೀಡಾಸಚಿವರಾದ ಜಯರಾಜನ್ ಅವರಿಗೆ ತಮ್ಮ  ಇಲಾಖೆಯ ಗಂಧಗಾಳಿಯೇ ತಿಳಿದಿಲ್ಲ. ಈಗ ಕೇರಳದಲ್ಲಿ ಎಲ್​ಡಿಎಫ್ ಅಧಿಕಾರದಲ್ಲಿದ್ದು, ಸದಸ್ಯರೆಲ್ಲಾ ಹಳೆಯ ಸರ್ಕಾರದಿಂದ ನೇಮಿತರಾಗಿದ್ದೀರಿ ಎಂದು ಅಂಜು ಕ್ರೀಡಾಇಲಾಖೆಯ ವಿರುದ್ಧ  ಕಿಡಿಕಾರಿದ್ದಾರೆ.

ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿರುವ ಅಂಜು, ಕ್ರೀಡಾ ಸಚಿವರಿಗೆ ಕ್ರೀಡೆಯ ಬಗ್ಗೆ ಕಿಂಚಿತ್ತೂ ತಿಳಿದಿಲ್ಲ. ಬೇಕಾಬಿಟ್ಟಿ ಹೇಳಿಕೆಗಳಿಂದ ಬಿಟ್ಟಿ ಪ್ರಚಾರ  ಪಡೆಯುತ್ತಿದ್ದಾರೆ. ಅಲ್ಲದೇ, ಕ್ರೀಡಾ ಪ್ರಾಧಿಕಾರದ ಸದಸ್ಯರ ವರ್ಗಾವಣೆಯನ್ನು ತಮ್ಮ ಸ್ವಾರ್ಥಕ್ಕಾಗಿ ತಡೆಹಿಡಿದಿದ್ದಾರೆ ಎಂದು ಅಂಜು ತಮ್ಮ ಲಿಖಿತ ದೂರಿನಲ್ಲಿ ಹೇಳಿದ್ದಾರೆ. 2003ರ ಅಥ್ಲೆಟಿಕ್ಸ್  ಪದಕ ವಿಜೇತೆ ಅಂಜು ಬಾಬಿ ಜಾರ್ಜ್ ಪ್ರಸ್ತುತ ಕೇರಳ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷೆಯಾಗಿದ್ದು, ತನಗೆ ಹಾಗೂ ಕ್ರೀಡಾ ಪ್ರಾಧಿಕಾರದ ಇತರ ಸದಸ್ಯರಿಗೂ ಮಂತ್ರಿಗಳು ತೊಂದರೆ ನೀಡುತ್ತಿದ್ದಾರೆ  ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸದಾ ಕಾಲ ಒಂದಿಲ್ಲೊಂದು ಕಾರಣಗಳಿಂದಾಗಿ ಸುದ್ದಿಯಾಗುವ ಕೇರಳ ಕ್ರೀಡಾ ಸಚಿವ ಇ. ಪಿ. ಜಯರಾಜನ್ ಈ ಹಿಂದೆ ಖ್ಯಾತ ಬಾಕ್ಸಿಂಗ್ ಪಟು ಮಹಮದ್ ಅಲಿ ನಿಧನರಾದಾಗ ಆತ ಕೇರಳದ  ಕ್ರೀಡಾಪಟು ಎಂದು ಹೇಳಿ ನಗೆಪಾಟಲಿಗೆ ತುತ್ತಾಗಿದ್ದರು. ಇದೀಗ ಮತ್ತೆ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿಯನ್ನು ನಿಂದಿಸಿದ ಆರೋಪದ ಮೇಲೆ ವಿಜಯರಾಜನ್ ಸುದ್ದಿಗೆ ಗ್ರಾಸವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com