ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಶರಪೋವಾ

ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ ಆರೋಪದ ಮೇರೆಗೆ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯಿಂಜ 2 ವರ್ಷ ನಿಷೇಧಕ್ಕೊಳಗಾಗಿದ್ದ ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವಾ ಅವರು ತೀರ್ಪುನ್ನು ಪ್ರಶ್ನಿಸಿ  ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮರಿಯಾ ಶರಪೋವಾ (ಸಂಗ್ರಹ ಚಿತ್ರ)
ಮರಿಯಾ ಶರಪೋವಾ (ಸಂಗ್ರಹ ಚಿತ್ರ)
Updated on

ನವದೆಹಲಿ‌: ನಿಷೇಧಿತ ಉದ್ದೀಪನ ಮದ್ದು ಸೇವಿಸಿದ ಆರೋಪದ ಮೇರೆಗೆ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯಿಂಜ 2 ವರ್ಷ ನಿಷೇಧಕ್ಕೊಳಗಾಗಿದ್ದ ರಷ್ಯಾದ ಟೆನಿಸ್‌ ತಾರೆ ಮರಿಯಾ  ಶರಪೋವಾ ಅವರು ತೀರ್ಪುನ್ನು ಪ್ರಶ್ನಿಸಿ  ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ (Court of Arbitration for Sport)ದಲ್ಲಿ ಮರಿಯಾ ಶರಪೋವಾ ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ತಮ್ಮ ವಿರುದ್ಧದ ಆದೇಶವನ್ನು  ಸಡಿಸಲಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಮನವಿಯಲ್ಲಿ ತೀರ್ಪಿನ ಅವಧಿಯನ್ನು ಉಲ್ಲೇಖಿಸಿರುವ ಶರಪೋವಾ, ಆದೇಶವವನ್ನು ರದ್ದು ಪಡಿಸುವಂತೆ ಕೋರಿದ್ದಾರೆ.

ಇನ್ನು ಇದೇ ಜುಲೈ 18ರಂದು ಕ್ರೀಡಾ ನ್ಯಾಯಾಲಯದಲ್ಲಿ ಶರಪೋವಾ ಅವರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಒಂದು ವೇಳೆ ನ್ಯಾಯಾಲಯ ನಿಷೇಧವನ್ನು ತೆರವುಗೊಳಿಸಿದರೆ  ರಷ್ಯಾದ ಆಟಗಾರ್ತಿ ಆಗಸ್ಟ್‌ 5ರಿಂದ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇ ಲಿಯನ್ ಓಪನ್‌ ಟೆನ್ನಿಸ್ ಟೂರ್ನಿಯ ವೇಳೆ ಐದು ಗ್ರಾಂಡ್ ಸ್ಲಾಮ್ ವಿಜೇತೆ ಮರಿಯಾ ಶರಪೋವಾ ಅವರು, ನಿಷೇಧಿತ ಮೆಲ್ಡೋನಿಯಮ್‌ ಔಷಧಿ  ಸೇವಿಸಿ ಸಿಕ್ಕಿಬಿದ್ದಿದ್ದರು. ಮಾಧ್ಯಮಗಳ ಮುಂದೆ ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದರು. ಹೀಗಾಗಿ ಅಂತರರಾಷ್ಟ್ರೀಯ ಟೆನ್ನಿಸ್‌ ಫೆಡರೇಷನ್‌, ಅವರ ಮೇಲೆ ಎರಡು ವರ್ಷ ನಿಷೇಧ ಹೇರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com